ವಿಶ್ವೇಶ್ವರ ಭಟ್ ಇವರಿಗೊಂದು ಪತ್ರ-ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರಿಂದ

ವಿಶ್ವೇಶ್ವರ ಭಟ್ ಅವರೇ ನೀವು ನಿಮ್ಮ ವಿಶ್ವ ವಾಣಿ ಪತ್ರಿಕೆಯಲ್ಲಿ ಶ್ರೀ ಸಾಣೇಹಳ್ಳಿ ಶ್ರೀಗಳ ಬಗ್ಗೆ  ಉದ್ದನೆಯ ಸುದೀರ್ಘ ಲೇಖನವನ್ನು ಓದಿದೆ.
        ನೀವು ಹಿಂದೆ  ಗೌರಿ ಲಂಕೇಶ ಅವರ ಹತ್ಯೆಯ ಬಗ್ಗೆ ಬರೆದ ನಿಮ್ಮ ಲೇಖನವು ನಿಮ್ಮ ವಿಕೃತ ಮನಸ್ಸಿನ ಕನ್ನಡಿ ಎಂದು ಅಂದು ಬಹುತೇಕರು ನಿಮ್ಮ ನಿಲುವನ್ನು ಟೀಕಿಸಿದರು.
ಹತ್ತು ತಿಂಗಳು ಹಿಂದೆ ಸಾಣೇಹಳ್ಳಿ ಡಾ ಪಂಡಿತಾರಾಧ್ಯ ಶ್ರೀಗಳು ಗಣಪತಿ ಪೂಜೆ  ಲಿಂಗಾಯತ  ಧರ್ಮಿಯರಿಗಲ್ಲ ಎಂದು ಪ್ರವಚನದಲ್ಲಿ ಹೇಳಿದಾಗ ನೀವು ಮತ್ತೆ ನಿಮ್ಮ ಕೊಂಕು ಮಾತಿನಿಂದ ಅವರನ್ನು ಕುಟುಕಲು ಯತ್ನಿಸಿದ್ದು  ಯಾರು ಮರೆತಿಲ್ಲ.  ಇತ್ತೀಚಿಗೆ ಚಿತ್ರದುರ್ಗದ ಹೊಳಲ್ಕೆರೆ ಕಾರ್ಯಕ್ರಮದಲ್ಲಿ ಶ್ರೀ ಗಳು ಲಿಂಗಾಯತ ಅವೈದಿಕ ಹಿಂದುಯೇತರ ಧರ್ಮ ಎಂದು ಹೇಳಿದ್ದು ಬಸವ ತತ್ವ ಆಧಾರಿತ ವಚನಗಳ ಸಾಕ್ಷಿ ಮತ್ತು ಸಾವಿರಾರು ಪುರಾವೆಗಳಿಂದ   ಹೇಳಿದ್ದೆ ಹೊರತು ನಿಮ್ಮ ಹಾಗೆ ಎಲ್ಲದ್ದಕ್ಕೂ ಮೂಗು ತೂರಿಸುವ ನಿಮ್ಮ ಕೆಟ್ಟ ಅಭಿಪ್ರಾಯಗಳ  ಹಾಗಲ್ಲ .  
  ಗೌರಿ ಲಂಕೇಶ ಅವರ ಸಾವನ್ನು ಸಂಭ್ರಮಿಸುವ ನೀವು ನಿಮ್ಮ ಯೋಗ್ಯತೆ ಇಡೀ ಕರ್ನಾಟಕಕ್ಕೆ ಗೊತ್ತಿದೆ.

 ವಿಶ್ವೇಶ್ವರ   ಭಟ್ಟರಿಗೆ ಕೆಲ ಪ್ರಶ್ನೆಗಳು
—————————————–
 1 ತಮ್ಮ ಪ್ರಕಾರ ಶ್ರೀ ಸಾಣೇಹಳ್ಳಿ ಶ್ರೀಗಳು ಲಿಂಗಾಯತರು ಹಿಂದೂಗಳಲ್ಲ ಎಂಬ ಮಾತನ್ನು ಅದೇ ವೇದಿಕೆಯ ಇನ್ನೊಬ್ಬ ವಚನಾನಂದ ಶ್ರೀಗಳು ಒಪ್ಪುತ್ತಿಲ್ಲ ಎನ್ನುವ ನೀವು . ವೈದಿಕ ಸನಾತನ ವ್ಯವಸ್ಥೆಯನ್ನು ಸಂಪೂರ್ಣ ಧಿಕ್ಕರಿಸಿ ತಾನೊಬ್ಬ ಅವೈದಿಕ ಸನಾತನ ವಿರೋಧಿ ಎಂದು 850 ವರ್ಷಗಳ ಹಿಂದೆಯೇ ಹೇಳಿದ ಬಸವಣ್ಣನವರ ನಿಲುವನ್ನು ನೀವು ಒಪ್ಪುತ್ತೀರಲ್ಲವೇ ?

2  ವೇದ ಶಾಸ್ತ್ರ ಆಗಮ ಪುರಾಣ ಕರ್ಮ ಸಿದ್ಧಾಂತಗಳನ್ನು ನಿರಾಕರಿಸಿ  ತಮ್ಮದೇ ಆದ ಬದುಕಿನ ಮಾರ್ಗವನ್ನು ಕೈಕೊಂಡ ಶರಣರ ನಿಲುವಿಗೂ ನಿಮ್ಮ ಅದೇ ಹಳೆಯ ವೈದಿಕ
ವಿಚಾರಗಳಿಗೂ  ವ್ಯತ್ಯಾಸವಿಲ್ಲವೇ ?

3  ಲಿಂಗಾಯತ ಧರ್ಮದ ಆಂತರಿಕ ಚರ್ಚೆಗೆ ನೀವೇಕೆ ಮೂಗು ತೂರಿಸುತ್ತೀರಿ ?

4  ಇವತ್ತಿಗೂ ಕೂಡ ನಿಮ್ಮ ಹಿಂದೂ ಧರ್ಮದ ಯಜ್ಞ ಹವನ ಹೋಮ ಜೊತೆಗೆ ಅನೇಕ ಕಂಧಚಾರಗಳು ರೂಢಿಯಲ್ಲಿವೆ . ನೀವು ಎಂದಾದರೂ ಅಂತಹ ಕಂಧಚಾರಗಳ ವಿರುದ್ಧ ಬರೆದಿರುವಿರಾ ಹೇಗೆ ?

5 ಹಿಂದೂ ಆವರಣದಲ್ಲಿರುವ ಲಿಂಗ ತಾರತಮ್ಯ  ಜಾತೀಯತೆ ಅಸಮಾನತೆ ಶ್ರೇಣೀಕೃತ ವ್ಯವಸ್ಥೆ ನೀವು ನೀವು ಒಪ್ಪುತ್ತೀರಲ್ಲವೇ .

6 ಮೊದಲು ನೀವು ನಿಮ್ಮ ಧರ್ಮದಲ್ಲಿನ ಕೊಳಕು ತೊಳೆದು ಕೊಳ್ಳಿರಿ ಇನ್ನೊಬ್ಬರ ಧಾರ್ಮಿಕ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಮಾತನಾಡದಿರುವುದು ಸೂಕ್ತ.

7  ನೀವೊಬ್ಬ ಹಿರಿಯ ಪತ್ರಕರ್ತರು ಕೇವಲ ಪ್ರಸಿದ್ಧಿಗೆ ಪ್ರಚಾರಕ್ಕೆ ನೀವು ಬರೆಯುತ್ತಿದ್ದರೆ ಇನ್ನು ಮುಂದೆ ನಿಮ್ಮ ಇಂತಹ ಕ್ಷುಲ್ಲಕ ಬರಹಗಳನ್ನು ನಿಲ್ಲಿಸಿ. ನಿಮ್ಮ ಪತ್ರಿಕಾ ಗುಣ ಧರ್ಮದ ಬಗ್ಗೆ ಕಾಳಜಿಪೂರಕ  ಎಚ್ಚರದಿಂದ ಕಾರ್ಯ ನಿರ್ವಹಿಸಿರೀ

ಲಿಂಗಾಯತ ಧರ್ಮದ ವಿಷಯದಲ್ಲಿ ನೀವು ಹೀಗೆ ಮೇಲಿಂದ ಮೇಲೆ ಮೂಗು ತೂರಿಸುವುದನ್ನು ನಿಲ್ಲಿಸಲು ಆಗ್ರಹಿಸುತ್ತೇವೆ.
—————————————————————————–

18 thoughts on “ವಿಶ್ವೇಶ್ವರ ಭಟ್ ಇವರಿಗೊಂದು ಪತ್ರ-ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರಿಂದ

  1. ತುಂಬಾ ಅರ್ಥ ಪೂರ್ಣವಾದ ಹೇಳಿಕೆ ಜೊತೆಗೆ ಪ್ರಶ್ನೆ ಗಳು ಸಮಯೋಚಿತವಾಗಿವೆ.

  2. ಭಾರಿ ಧೈರ್ಯ ಸರ್ ತಮ್ಮದು. ಅನ್ಯಾಯ ಪ್ರತಿಭಟಿಸುವ ಮನಸ್ಸು ಹೀಗೇ… ತಮ್ಮ ಪ್ರಶ್ನೆಗಳು ರೋಮಾಂಚನಗೊಳ್ಳುವಂತಿವೆ.
    ಸಮಾಜದ ಕಳಕಳಿ ತಮ್ಮದು.

  3. ಅರ್ಥಪೂರ್ಣ ಹೇಳಿಕೆ ಕೊಟ್ಟು, ಸರಿಯಾದ ಪ್ರಶ್ನೆಗಳನ್ನೇ ವಿಚಾರಿಸಿದ್ದೀರಿ ಸರ್. ನಿಜಕ್ಕೂ ತಮ್ಮ ಸಾಮಾಜಿಕ ಕಳಕಳಿಗೆ ಅನಂತ ಶರಣು

    ಡಾ ಗೀತಾ ಡಿಗ್ಗೆ
    ಸೋಲಾಪುರ

  4. ಸಮಾಜದ ಬಗೆಗೆ ನಿಜವಾದ ಕಳಕಳಿ ಇರುವವರು ಮಾತ್ರ ಹೀಗೆ ನಿರ್ದಾಕ್ಷಿಣ್ಯವಾಗಿ,
    ಎದೆಗಾರಿಕೆಯಿಂದ, ಯಾವುದೇ ಹಿಂಜರಿಕೆಯಿಲ್ಲದೆ ಇನ್ನೊಬ್ಬರನ್ನು ಹೀಗೆ ಪ್ರಶ್ನಿಸುವುದಕ್ಕೆ ಸಾಧ್ಯವಾಗುತ್ತದೆ.. ಎಲ್ಲರ ಪರವಾಗಿ ನಿಮಗೆ ಕೋಟಿ ಕೋಟಿ ನಮನಗಳು

    ಸುಧಾ ಪಾಟೀಲ
    ಬೆಳಗಾವಿ

  5. ತಮ್ಮ ಪ್ರತಿಬಟನಾತ್ಮಕ ಉತ್ತರಕ್ಕೆ ನಮ್ಮೆಲ್ಲರ ಸಹಮತವಿದೆ ಸರ್

  6. ಇದು ಡಾ ಶಶಿಕಾಂತ ಪಟ್ಟಣ ಸರ್ ಅವರ ಶರಣ ತತ್ವದ ಮೇಲಿನ ನಿಷ್ಠೆ,ಹಾಗೂ ಪ್ರಾಮಾಣಿಕವಾದ ಕಳಕಳಿಯ ಪ್ರಯತ್ನ ಮತ್ತು ಹೋರಾಟದ ನುಡಿಗಳು

  7. ಶಶಿಕಾಂತ್ ಪಟ್ಟಣ ಇವರಿಗೊಂದು ಸಲಾಂ. ನಿಮ್ಮ ಕಳಕಳಿಯ ಮಾತುಗಳು ಎಲ್ಲರ ಹೃದಯ ತಲುಪಲಿ. ಮತ್ತು ಎಲ್ಲ ಸಂಘಟನೆ ಗಳು ಇದರ ವಿರುದ್ಧ ಪ್ರತಿಭಾಟಿಸ ಬೇಕು.
    Dr Mahabaleshwar Reddy Hosoet

  8. ನಿಮ್ಮ ಅಭಿಪ್ರಾಯಕ್ಕೆ ೨೦೦% ಒಪ್ಪಿಗೆ ಇದೆ.ಯಾರಾದರೂ ಮಹನೀಯರು ಶ್ರೀ ವಿಶ್ವೇಶ್ವರ ಭಟ್ ರವರ ಅಂಕಣಕ್ಕೆ ಪ್ರತಿಕ್ರಿಯೆ ನೀಡುವದನ್ನು ಕಾಯುತ್ತಿದ್ದೆ.ಈಗ ಮನಸ್ಸು ಹಗುರವಾಯ್ತು.ಬಹುತೇಕ ಇದು ಅವರ ಕೊಂಕು ಬುದ್ದಿಗೆ ಸಾಕಾಗುವುದಿಲ್ಲ. ಅನಿಸುತ್ತದೆ.
    ನಾವು ಅಷ್ಟೂಂದು ಅಭ್ಯಾಸಿಗಳಲ್ಲ.ಅವರಿಗೆ ತಿಳಿಹೇಳಲು.ಅಲ್ಲದೇ ಅವರಿಗೆ ಅವರದೇ ಆದ ಪತ್ರಿಕೆ ಇದೆ.ಸೀಮಿತ ಒದುವ ಬಳಗವಿದೆ ( ಕೆಲವೊಂದು ಲಿಂಗಾಯತ ಧರ್ಮಿಯರೂ ಕೂಡಾ ಅವರ ಅಭಿಮಾನಿಗಳು ಇದ್ದಾರೆ, ಇದನ್ನು ಟ್ವಿಟರ್ ದಲ್ಲಿ ಗಮನಿಸಿರುವೆ,ಅಲ್ಲದೇ ಅಲ್ಲಿ ನಾನು. ತಾತ್ವಿಕವಾಗಿ ವಿರೋಧಿಸಿರುವೆ)
    ಎಲ್ಲವೂ ಒಕ್ಕೋರಲಿನಿಂದ ಪ್ರತಿಭಟಿಸಿದರೆ ಮುಂದೆ ಅವರು ತಿದ್ದಿಕೊಳ್ಳಬಹುದು.

  9. ಅವರ ಕ್ಷುಲ್ಲಕ ಹೇಳಿಕೆಗೆ ಸಮರ್ಥವಾದ ಉತ್ತರ ಕೊಟ್ಟಿದ್ದೀರಿ ಸರ್…
    ಗೀತಾ ಜಿ ಎಸ್

  10. ವಿಷ ಭಟ್ಟನಿಗೆ ಒಳ್ಳೆಯ ಚಾಟಿ ಏಟು ಬೀಸಿದ್ದಿರಿ. ಶರಣು ಶರಣಾರ್ಥಿಗಳು

  11. ನನಗೆ ವೇಳೆಯ ಕೊರತೆ ಇದೆ ಬರೆಯುವದಕ್ಕೆ ವೇಳೆಯಿಲ್ಲ ಎನ್ನುವವರು ದಯವಿಟ್ಟು ಇಂತಹ ಪ್ರಕಾಣಗಳಲ್ಲಿ ಲಕ್ಷ ವಹಿಸದೆ ಇದ್ದಲ್ಲಿ ಅನಾಹುತ ತಪ್ಪಿದ್ದಲ್ಲ ಆದ್ದರಿಂದ ಎಚ್ಚರವಹಿಸಿ ಲೈಕ್ ಅಥವಾ ಕಾಮೆಂಟ್ ಮೂಲಕ ತಮ್ಮ ವಿಚಾರ ತಿಳಿಸಿ ಧನ್ಯವಾದಗಳು

Leave a Reply

Back To Top