ಕಾವ್ಯ ಸಂಗಾತಿ
ಡಾ ಶಶಿಕಾಂತ .ಪಟ್ಟಣ ರಾಮದುರ್ಗ-
ಆಚರಿಸಿದೆವು ಸ್ವಾತಂತ್ರೋತ್ಸವ
ಗೆಳೆಯರೆ
ಆಚರಿಸಿದೆವು ನಾವು ಸ್ವಾತಂತ್ರೋತ್ಸವ
ದೇಶದ ಗಡಿ ಸೈನಿಕರ ಸರ್ಪಗಾವಲು
ಸಂಸತ್ತು ವಿಧಾನ ಸಭೆಗೆ ಬಿಗಿ ಭದ್ರತೆ .
ಮಂತ್ರಿಗಳು ನಾಯಕರಿಗೆ ಜೀವ ರಕ್ಷಣೆ .
ಸಾಯುತ್ತಿದ್ದಾರೆ ಯೋಧರು ರೈತರು.
ರಕ್ತದೊಕಳಿ ಉಗ್ರ ಅಟ್ಟಹಾಸ
ಬಾಂಬ್ ಫಿರಂಗಿಗಳ ಹಾರಾಟ .
ನಿಷ್ಠೆ ಸ್ವಾಭಿಮಾನದ ಮಾರಾಟ .
ಇಲ್ಲ ಇಲ್ಲಿ ದೇಶ ಪ್ರೇಮ ಸ್ವಾತಂತ್ರ .
ಬದುಕು ಅನಿಶ್ಚಿತ ಪರತಂತ್ರ
ಬಣ್ಣ ಬಣ್ಣದ ಬಲೂನ್ ಪತಾಕೆ
ರಂಗು ರಂಗಿನ ಉಡುಪಿನ ಮಕ್ಕಳು.
ಜೈ ಜವಾನ್ ಜೈ ಕಿಸಾನ್ ಘೋಷಣೆ .
ಕಳ್ಳ ಕಾಕರ ಭ್ರಷ್ಟ ನಾಯಕರ ಪೋಷಣೆ .
ಆಗಸ್ಟ್ ೧೫ ಸಾರ್ವತ್ರಿಕ ರಜೆ .
ಶಾಲಾ ಮಕ್ಕಳಿಗೆ ಶಿಕ್ಷಕರಿಗೆ ನಿಲ್ಲುವ ಸಜೆ .
ಎಲ್ಲರ ಸಮ್ಮುಖದಲ್ಲಿ ಧ್ವಜಾರೋಹಣ
ಭ್ರಷ್ಟ ಮಂತ್ರಿ ಶಾಸಕರ ಅಬ್ಬರದ ಭಾಷಣ .
ನೆಲ ಜಲ ಗಣಿ ಕೃಷಿಯ ಕಳವಳ .
ಜೋರಾಗಿ ಚಪ್ಪಾಳೆ ಹಾರ ಸತ್ಕಾರ
ಪುಟ್ಟ ಕಂದಮ್ಮಗಳ ಗಾಂಧಿ ಭಗತರ ಪಾತ್ರ
ಜಹಾಂಗೀರ ಜಾಮುನ ಸಿಹಿ ಭೋಜನ
ಸಂಜೆ ಕಲಾವಿದರ ಹಾಡು ತಬಲಾ ವಾದನ .
ಬಾನುಲಿ ದೂರದರ್ಶನದಲಿ ನೇರ ಬಿತ್ತರ .
ಮತ್ತೆ ಮಾಡಿ ಮುಗಿಸಿದೆವು ಸ್ವಾತಂತ್ರೋತ್ಸವ
ದಶಕಗಳಿಂದ ಒಂದು ದಿನದ ನಾಟಕ .
ಬನ್ನಿ ಇನ್ನಾದರು ಗಟ್ಟಿಗೊಳಿಸುವ ನಮ್ಮತನ
ಮರೆಯುವುದು ಬೇಡ
ನಮ್ಮವರ ತ್ಯಾಗ ಬಲಿದಾನ .
ಡಾ ಶಶಿಕಾಂತ .ಪಟ್ಟಣ -ರಾಮದುರ್ಗ –
ನಮ್ಮತನವನ್ನು ಮರೆಯದೆ ಗಟ್ಟಿಗೊಳಿಸೋಣ ಎನ್ನುವ ಸಂದೇಶ ಎಲ್ಲರ ಮನವನ್ನು ಮುಟ್ಟುವಲ್ಲಿ ಯಶಸ್ವಿಯಾಗಿದೆ
ಸುಧಾ ಪಾಟೀಲ್
ಬೆಳಗಾವಿ
ಸ್ವಾತಂತ್ರ್ಯದ ಕುರಿತಾದ ವಾಸ್ತವ ಚಿತ್ರಣವನ್ನು ಅನಾವರಣಗೊಳಿಸಿದ್ದೀರಿ ಕವಿತೆಯಲ್ಲಿ ಧನ್ಯವಾದಗಳು ಸರ್