ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ತಾಳಗಳ ಧನ್ಯತೆ

ಅರ್ಧ ಶತಕಕ್ಕೂ ಹಿಂದಿನ ನೆನಪುಗಳ
ತಾಳ ಮೇಳೈಸಿ ಈಗ ಸುಶ್ರಾವ್ಯ ಸಂಗೀತ

ಬರೇ ಹಿನ್ನೆಲೆಯ ಗಾಯನ ಆಗ
ಈಗ ಹೃದಯದೊಳಗಿಂದ ಪುಟಿದ
ಸಂಗೀತ ಕಾರಂಜಿಗಳ ಘಮ!

ನಿರ್ದೇಶಕನಿಲ್ಲ ನಟನೆಯೂ ಇಲ್ಲ
ಇಲ್ಲೆಲ್ಲ ಬರೇ ಆಶು ಭಾಷೆಗಳು
ಆಡು ಮಾತುಗಳು
ಮನಸಿನೊಳ ಹೊಕ್ಕು
ಅಗ್ನಿಕುಂಡದಿಂದ ಚಿಮ್ಮಿದ
ಅಪರಂಜಿ ಚಿನ್ನ

ಅರವತ್ತೇಳರ ಎಂ ಎಂ ಸಿಯ
ಬಂಗಾರಗಳು ನಾವು
ಸಿಂಗಾರಗಳು ನಾವು
ಅನುಭಾವಿಕರು ನಾವು
ಅನನ್ಯರು ಧನ್ಯರು!

3 thoughts on “ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ತಾಳಗಳ ಧನ್ಯತೆ

  1. ವೆಂಕಟೇಶ್ ನಿಮ್ಮ “ತಾಳಗಳ ಧನ್ಯತೆ” ಓದಿದಾಗ ಒಂದು ಕ್ಷಣ ನನಗೂ ಆಗಿನ ಎಂ.ಎಂ.ಸಿ. ಬದುಕಿನ ದಿನಗಳು ಕಣ್ಣ ಮುಂದೆ ಸಿನಿಮಾ ಆಗಿ ಖುಷಿ ಕೊಟ್ಟಿತು. ಬಹುಶಃ ಇದೇ ಇರಬೇಕು “ಕಾವ್ಯ ಶಕ್ತಿ” ಎಂದರೆ, ಅಲ್ಲವೆ?

  2. ಹೌದು ಮೂರ್ತಿ
    ಹಳೆಯ ನೆನಪುಗಳು ಯಾವಗಲೂ ಅತಿ ಚಂದ. ಅದಕ್ಕೆ ಕಾವ್ಯ ಆಗುವ ಶಕ್ತಿ ಅದ್ಭುತ.
    ಹೃದಯದ ಆಳಕ್ಕಿಳಿದ ನೆನಪು ಸದಾ ವರ್ಣನಾತೀತ.
    Thanks Murthy

  3. ಮರೆತೇನೆಂದರೂ ಮರೆಯಲಿ ಹ್ಯಾಂಗ,
    ಎಂ ಎಂ ಸಿ ಯ ಜೀವನಾ.
    ನೆನಪಿಸಿದ್ದಕ್ಕೆ ಧನ್ಯವಾದಗಳು.
    .. ಕೆ. ಬಿ. ಸೂರ್ಯ ಕುಮಾರ್ ಮಡಿಕೇರಿ

Leave a Reply

Back To Top