ಲೋಹಿತೇಶ್ವರಿ ಎಸ್ ಪಿ ಅವರ ಕವಿತೆ-ಕಾಲದ ಕನ್ನಡಿ

ಕಾಲದ ಕನ್ನಡಿಯೆದುರು
ನಿಂತಾಗಲೆಲ್ಲಾ
ನಿನ್ನದೇ ಪ್ರತಿಬಿಂಬ

ಕಳೆದು ಹೋಗಿದೆ
ನನ್ನ ರೂಪ
ನಿನ್ನದೇ ನೆನಪಿನಲಿ

ಬರೆದ ಸಾಲುಗಳಾದರೂ
ಕಣ್ಣಮುಂದಿವೆ ಎಂಬ
ಸಮಾಧಾನ

ಆ ಸಾಲುಗಳ ಕಂಡೊಡನೆ
ಮರೆಯಾದ ಹಲವು ಸಾಲುಗಳು
ಬಂದು ಮುನ್ನುಡಿಯ ಕೂಡಿವೆ

ಗುಪ್ತಗಾಮಿನಿಯಾಗಿ
ಸುಪ್ತ ಮನಸ್ಸಿನ ಅದ್ಭುತ
ಅನುಭವವಾಗಿ

ಕಾಲದ ಕನ್ನಡಿಯೆ ಹಾಗೆ
ಇರುವುದ ದೂರಸರಿಸಿ
ಮತ್ತೆ ಸನಿಹವಾಗಿಸುವುದು

ಕಾಲದ ಕನ್ನಡಿ
ದೂರ ಸನಿಹ ಭಾವ ಎಂಬ
ಭಾವಗಳ ಬೆನ್ನುಡಿ…


Leave a Reply

Back To Top