ಕಾವ್ಯ ಸಂಗಾತಿ
ಪಿ.ವೆಂಕಟಾಚಲಯ್ಯ
ಬದುಕು
ಜನನ-ಮರಣ, ನಡುವೆ ಬದುಕು,
ಕ್ಷಣಿಕವೆನೆ, ಸದಾತಂಕ ಅಳಕು,
ಬದುಕು ಇರುವ, ನೂರು ಪಾಲು,
ನೆಮ್ಮದಿ ಇರೆ, ಒಂದೇ ಪಾಲು,
ಮನುಜ ಇಂತಿರೆ,
ನಿನಗೆಲ್ಲಿ ಆಸರೆ.
ಸತ್ಯವೊಂದೆ, ನಿತ್ಯವೆಂದು,
ಉಳಿದೆಲ್ಲವು, ಮಿಥ್ಯವೆಂದು,
ನಂಬಿ ಬದುಕೊ, ಜನರನರಸಿ,
ಬದುಕು ಪೂರ್ಣ, ಕಾಲಸವೆಸಿ,
ಹುಡುಕ ಹೊರಟರೆ,
ನಿರಾಸೆ ತೊಂದರೆ.
ಮಮತೆಯೊಡಲ, ತ್ಯಾಗದೊಲವು,
ಸ್ವಚ್ಛ ಬದುಕು, ನಿನ್ನಾ ನನ್ನ ಉಳಿವು,
ಲೋಕವಿದೇನೊ, ಅಂಕು ಡೊಂಕು,
ನೇರಗೊಳಿಸುವ, ಸಾದ್ಯವೆನಿತು,
ಮನುಜ ಇಂತಿರೆ,
ನಿನಗೆಲ್ಲಿ ಆಸರೆ.
ಸಾತ್ವಿಕ ಗುಣವಿರೆ, ನಿರ್ಮಲ ಬದುಕು,
ರಜೋ-ತಾಮಸ, ಅಜ್ಞಾನಿಯ ಬದುಕು,
ವೇದ ನುಡಿಯುವ, ಗೀತೆ ಸಾರುವ ,
ತ್ರಿಗುಣವ ಮೀರುವ, ನಿರ್ಗುಣ ಬದುಕು ,
ಮನುಜ ಅರಿತರೆ,
ನಿನಗಲ್ಲೆ ಆಸರೆ.
—————————–
ಪಿ.ವೆಂಕಟಾಚಲಯ್ಯ.
ತುಂಬಾ ಅರ್ಥಪೂರ್ಣವಾಗಿದೆ.