ಕಾವ್ಯ ಸಂಗಾತಿ
ಲಲಿತಾ ಕ್ಯಾಸನ್ನವರ
ನಿನಗಾಗಿಯೇ…..
ಕಣ್ಣಿಗಚ್ಚಿಧ ಕಪ್ಪು
ತಿದ್ದಿ ತೀಡಿದಾ ಹುಬ್ಬು
ತುಟಿತುಂಬಿದಾ ಕೆಂಪು
ಕಾಯುತಿದೆ ನಲ್ಲಾ ನಿನ್ನ
ಹಾರುತಿಹ ಮುಂಗುರುಳು
ನಶೆತುಂಬಿದಾ ಆಲಿಗಳು
ಕೆನ್ನೆ ಮೇಲಣ ಗುಳಿಗಳು
ಕಾಯುತಿವೆ ನಲ್ಲಾ ನಿನ್ನ
ಮೂಗುತಿಯಾ ಗತ್ತು
ಹೊಳೆಯುವ ಬೊಟ್ಟು
ಸೀರೆಯಂಚಿನಾ ಕುಚ್ಚು
ಕಾಯುತಿವೆ ನಲ್ಲಾ ನಿನ್ನ
ಸಶೆಯೇರಿದಾ ಹೊತ್ತು
ಮೈ ಬಿಗಿಯುತಲಿತ್ತು
ನಿನ್ನ ನೆನಪಲ್ಲೆ ಅತ್ತು
ಕಾಯುತಿಹೆ ನಲ್ಲಾ ನಿನ್ನ
ಕಣ್ಣಾಲಿಗೆ ಕೋಡಿ ಬಿತ್ತು
ನಿಟ್ಟುಸಿರು ನಿರಂತರವಾಯ್ತು
ನಗೆ ಮಾಸಿಯೇ ಹೋಯ್ತು
ಆದರೂ ಕಾಯುತಿಹೆ ಇಲ್ಲೆ
ಹರೆಯದ ಬಿಸಿ ಕೆನ್ನೆಯ ಹಸಿ
ಪ್ರೀತಿಯ ಹುಸಿಸಾರಿದೆ ನಲ್ಲಾ
ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಸತ್ಯ
ಆದರೂ ಕಾಯುತಿಹೆ ನಲ್ಲಾ..
ಕಾಯುತಿಹೆ ನಿನಗಾಗಿ ಹಗಲಿರುಳು
ಹುಚ್ಚಿ ತರಹ ಉಸಿರ ನುಂಗುತ್ತಾ
ಹುಸಿಯನ್ನ ಮರೆಯುತ್ತಾ
ನಲ್ಲಾ ನಿನ್ನ ಪ್ರೀತಿಯ ನೆರಳ ಬಯಸುತ್ತಾ
———————————
ಲಲಿತಾ ಕ್ಯಾಸನ್ನವರ
ಅಕ್ಕ ಕವಿತೆ ತುಂಬಾ ಚೆನ್ನಾಗಿ ಬರೆದಿದ್ದೀರಿ