ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಈಗ ಇರುವರೇ ಗೆಳತಿ ನಿನ್ನ ಭಾವ ಚಿತ್ರ ಹೊಗಳುವವರು
ಇದ್ದರೇ ಯಾರಾದರೂ ನಿನ್ನಂದ ವಿಶೇಷಗಳ ಗುರುತಿಸಿದವರು

ವರ್ಣಿಸಿದ್ದನೇ ಎಂದಾದರೂ ಒಮ್ಮೆ ನಿನ್ನ ಪತಿ ನಿನ್ನ ಚಂದವ
ಇಹರೇ ಯಾರಾದರೂ ‘ಹೊನ್ನಾವರಿ’ ಬಿರುದು ನೀಡಿದವರು.

ಎಲ್ಲೋ ದೂರ ಅಭಿಮಾನಿ ಮನದಿ ಇರಿಸೆ ನಷ್ಟವೇನು
ಇಹರೇ ಅವನಿಗಿಂತ ನಿನ್ನಮುಖ ಕವಿತೆಮಾಡಿ ಮೆಚ್ಚಿದವರು

ಭಾವಜೀವಿ,ಕವಿ,ಸಭ್ಯನವನು ಕವನದಿ ಎನೋ ಬಡಬಡಿಸಿದ
ಜನರಿಹರು ಅರಿವಿಗೆ ಬಾರರು ಕಾಮಕ ಕಣ್ಣಲಿ ನೋಡಿದವರು

ಲೈಲಾ ಕಪ್ಪೋ ಅದ್ಹೇಗೆ ಇಷ್ಟ ನಿನಗೆ ಎಂದರು ಜನರೆಲ್ಲಾ
ಇರಲಿಲ್ಲ ಜನರಲ್ಲಿ ಮಝ್ನ ಕಣ್ಗಳಿಂದ ನೋಡಿದವರು

ಕೃಷ್ಣಾ! ಗೊತ್ತವಗೆ ಅಹಂಕಾರಕೆ ಉದಾಸೀನ ಮದ್ದೆಂದು
ಕೈ ಇರಿಸು ಎದೆಮಧ್ಯೆ, ಹೇಳ್ ಇಹರೆ ಅವನಿಗಿಂತ ಕಾಡಿದವರು.

About The Author

Leave a Reply

You cannot copy content of this page

Scroll to Top