ಕಾವ್ಯ ಸಂಗಾತಿ
ಎಸ್.ಜಿ.ಕೊಪ್ಪಳ
ಭಾ( ಭ)ವ ಸಾಗರ
ಸಮುದ್ರದಲ್ಲಿ ಜೀವಿಸಿವೆ ಸಾವಿರಾರು ಮೀನು.
ನನ್ನ ಭಾವ ಕಡಲಿನಲ್ಲಿ.
ಎರಡೇ ಎರಡುಮೀನು.
ಭಾ( ಭ)ವಸಾಗರದಿ ಅದು.
ಕೇವಲ ನಾನು ನೀನು
ಕಡಲಿನಲ್ಲಿ ಬರುವವು ಸಣ್ಣ
ದೊಡ್ಡ ತೆರೆಗಳು ಆಗಾಗ.
ಬಾಳ ಸಾಗರದಲ್ಲಿಯೂ.
ಕೂಡಬರಲಿಅಲ್ಲಲ್ಲಿತರಂಗ.
ಅದು ಸಹಜ, ಏರಿಳಿತ
ಇದು ಚಲನೆಯ ಸೂಚಕ.
ಹುಣ್ಣಿಮೆಯಲಿ ಹಿಗ್ಗುವ ಶರಧಿ
ಉಳಿದಂತೆಸಹಜ
ಖುಷಿಗೆ ಹಿಗ್ಗುವ ನಾವು.
ದುಃಖಕೆ ಕುಗ್ಗುವುದೇಕೆ
ಸಮುದ್ರಕ್ಕಿಂತಉಪಮೆ.
ಬೇಕೆ ಸಮಾಧಾನಕ್ಕೆ.
ಉಕ್ಕುವುದು ಕಡಲು
ಭೋರ್ಗರೆಯುವದು.
ಯಾವಕೊಂಕುಬಿಂಕಿಲ್ಲದೆ
ನಾವು ಕಲಿಯಬಾರದೇಕೆ
ಬಾಳುವ ಉತ್ತಮ ರೀತಿ.
ಅರಿಯಬಾರದೇಕೆ
ಸಮಾಧಾನಸಮುದ್ರದಂತೆ.
ಎಸ್.ಜಿ.ಕೊಪ್ಪಳ