ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ
ಮುಗುಳ್ನಗೆ
ಒಂದು ಮುಗುಳ್ನಗೆ
ಬೇಕು ನಲಿವಿಗೆ
ನೋವ ಅಳಿವಿಗೆ
ನೆಮ್ಮದಿಯ ಉಳಿವಿಗೆ
ಬದುಕಿನ ಗೆಲುವಿಗೆ
ನಾಳಿನ ಮುನ್ನುಡಿಗೆ
ಬದುಕೆಂದರೆ ಗೆಲುವಲ್ಲ
ಬರೀ ಸೋಲುಗಳಲ್ಲ
ಸೋಲು ಗೆಲುವುಗಳ
ನಡುವಿನ ಒಂದಿಷ್ಟು
ಗಟ್ಟಿಯಾದ ನೆನಪುಗಳ
ಸಮೃದ್ಧ ಉಳಿವು
ಮುದ್ದಾದ ಮನಸಿಗೆ
ಸೊಗಸಾದ ಕನಸಿಗೆ
ಜೊತೆಯಾಗಲಿ ನಗುವು
ಕೈಹಿಡಿಯಲಿ ಒಲವು
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ಇನ್ನೆಲ್ಲೋ ಸ್ವಚ್ಛಂದವಾಗಿ ಹರಿದು
ನದಿಯು ಸಾಗರವ ಅಪ್ಪುವಂತೆ
ಕಣ್ಣೋಟಕೆ ಮನವು ಬೆರೆಯುವಂತೆ
ಜೀವಗಳು ಜೊತೆಯಾಗಲಿ
ಕಷ್ಟಗಳಿಗೆ ಹೆಗಲಾಗಲಿ
ಪಯಣ ಸಾಗಲಿ ಕೊನೆವರೆಗೆ
ನಲಿವಿನಲಿ ಸಂತೃಪ್ತಿಯಲಿ
ಮುಗುಳ್ನಗೆಯ ಬೆಳಕು
ಬೆಳಗಲಿ ಈ ಜಗದಲಿ
ಸ್ನೇಹ ಸಂಬಂಧ ವೃದ್ಧಿಯ
ಬೆಸೆಯುವ ಕೊಂಡಿಯಾಗಲಿ
ಸೌಹಾರ್ಧತೆಗೆ ನೆಲೆಯಾಗಲಿ
ನಾಗರಾಜ ಜಿ. ಎನ್. ಬಾಡ
ವಂಡರ್ಫುಲ್ ಸರ್
ಚಂದವಾಗಿದೆ ಅಣ್ಣ