ವಿದ್ಯಾರ್ಥಿ ಕವಿತೆ-ಅದಿತಿ ಲಕ್ಷ್ಮೀ ಭಟ್, ಮಳೆ

ಗುಡುಗು ಮಿಂಚು ಸಿಡಿಲು,
ಗಾಳಿ,ಮಳೆಯ ಮುಗಿಲು;
ಗಢಗಢವೆನುತಿದೆ ಊರು,
ಝಳಝಳ ಸುರಿದಿದೆ ನೀರು !!

ನೀರು,ಮಣ್ಣ ಕೊಚ್ಚಿತು,
ಅಂತರಂಗ ನಡುಗಿತು;
ಸಾವಿನ ಭಯ ಹೆಚ್ಚಿತು,
ಸಿಹಿಮಳೆ ಕಹಿಯಾಯಿತು !!

ಕಷ್ಟ ಮನುಜರಿಗಾಯಿತು,
ನೋವು ನಷ್ಟ ಸಂಭವಿಸಿತು
ಅರಿವಿರದೆ ಹಾನಿಯಾಯಿತು,
ಪ್ರಕೃತಿ ಮುನಿಸು ತೋರಿತು !!

ದೇವಿಯ ರೌದ್ರ ರೂಪ ನರ್ತನ,
ನಾಕದ ಕಡೆಗೆ ತಿರುಗಿತು;
ಮನೆ,ಮರಕೆ ಹಾನಿಗೈದಿತು,
ಮಳೆಯು ಕಹಿಯನಿತ್ತಿತು !!



13 thoughts on “ವಿದ್ಯಾರ್ಥಿ ಕವಿತೆ-ಅದಿತಿ ಲಕ್ಷ್ಮೀ ಭಟ್, ಮಳೆ

  1. ಮಳೆ – ಇಳೆಯ ಇಂದಿನ ಕವನ ಅರ್ಥಪೂರ್ಣವಾಗಿದೆ. ಶುಭವಾಗಲಿ.

  2. Nice perspective! Usually, most poets write about the positives of rain. You’ve expressed the devastation that excessive rains can bring.

Leave a Reply

Back To Top