ರಾಜೇಶ್ವರಿ ಎಸ್ ಹೆಗಡೆ ಅವರ ಕವಿತೆ- ಸ್ನೇಹಜೀವಿ

ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ
ಬೆತ್ತಲೆ ಹೃದಯ ಬೆಸೆದ ಭಾವದ ಜೀವಿ
ರಕ್ತ ಆಸ್ತಿ ಹಂಚಿಕೊಂಡು ಹುಟ್ಟಲಿಲ್ಲ
ಕಷ್ಟ ಸುಖಕೆ ಬೆನ್ನು ಮಾಡಿ ಕದಲಲಿಲ್ಲ.

ಎಲ್ಲೋ ಹುಟ್ಟಿ ಎಲ್ಲೋ ಬೆಳೆದೆವು ನಾವು
ಜೀವನದಲ್ಲಿ ಸ್ನೇಹ ಲೇಪದಿ ಜೊತೆಯಾದೆವು
ಬದುಕಿನ ಪಯಣದಿ ಪರಿಚಿತರಾದೆವು
ಉಸಿರು ಬೆಚ್ಚಗಿಡುವ ಗೆಳೆಯರಾದೆವು

ಮೊಗ್ಗಾಗಿ ಹುಟ್ಟಿದ ಈ ಬಾಲ್ಯದ ಸ್ನೇಹ
ಹೂವಾಗಿ ಅರಳಿಲ್ಲಿ ಕಂಗೊಳಿಸಿತು
ಹನಿಯಾಗಿ ಹರಿದು ಬಿರಿದು ಬಂದ ಸ್ನೇಹ
ಹೊಳೆಯಾಗಿ ಹರಿದು ಹೃದಯ ಬೆಸೆಯಿತು.

ನಗುವಿನಿಂದ ನನ್ನ ನೀನು ಛಿದ್ರಗೊಳಿಸಿದೆ
ಪ್ರೀತಿಯಿಂದ ಬಂದು ಹೃದಯ ಸ್ಫರ್ಶಿಸಿದೆ
ಕೋಪವೆಂಬ ಕರ್ಪೂರವನ್ನು ಬೆಳಗಿದೆ
ಸ್ನೇಹ ಜ್ಯೋತಿಯಿಂದ ಅದನು ಕರಗಿಸಿದೆ.


Leave a Reply

Back To Top