ಕಾವ್ಯ ಸಂಗಾತಿ
ಪ್ರಮೋದ ಜೋಶಿ
ಪರಿಪಾಠದ ಪಾಠ
ಪೂರ್ವದಿ ಬಂದು
ಬೆಳಕನ್ನೆಲ್ಲಾ ಹರವಿಬಿಟ್ಟಾ
ಜಗದ ತುಂಬಾ
ಎಲೆ ತುದಿಗೆ ಕುಳಿತ
ಮಂಜಿನ ಹನಿಯನು
ಹೊಳೆವಂತೆ ಮಾಡಿ ಮುತ್ತಾಗಿಸಿದ
ಮರದೊಳು ಅವಿತ
ಪಕ್ಷಿಗಳೆಬ್ಬಿಸಿ ಸ್ವಾಗತ ಕೇಳಿದ
ತನ್ನಾಗಮನಕೆ
ಮೂಡಿದ ಬೆಳಕಿಂದ
ಹೊಸದಿನ ತಂದು
ಚಾಲನೆ ನೀಡಿದ ಜಗಕೆಲ್ಲಾ
ಪೂರ್ವದಿ ಬಂದು
ಜಗವ ನಡೆಸಿ
ವಿರಮಿಸಿದಾ ಪಶ್ಚಿಮದಿ
ದಿನದಿನವೂ ನಡೆವ ಕಾರ್ಯಕೆ
ವಿರಮಿಸದೆ ನಡೆದು
ಪರಿಪಾಠದ ಪಾಠವ ಅರುಹಿದಾ
ಪ್ರಮೋದ ಜೋಶಿ
Nice