ಮಹಾಲಕ್ಷ್ಮೀ ಸಾಂಬ್ರಾಣಿ ಕವಿತೆ-ನಮ್ಮನೆಯ ಧೀರ

ಕಾವ್ಯ ಸಂಗಾತಿ

ಮಹಾಲಕ್ಷ್ಮೀ ಸಾಂಬ್ರಾಣಿ

ನಮ್ಮನೆಯ ಧೀರ

ನಗುಮೊಗದ ಚೋರ
ನಮ್ಮೆಲ್ಲರ ಪಾಲಿನ ರಾಜಕುಮಾರ
ಇವರ ನಡೆ ನುಡಿ ಎಲ್ಲರಿಗೂ ಪ್ರೋತ್ಸಾಹಕರ
ಇವರೇ ನಮ್ಮ ಚಂದ್ರಶೇಖರ

ಇವರ ಮಾತು ಬೆಳ್ಳಿ ಬಂಗಾರ
ಇವರ ನಡತೆಯಲ್ಲಿದೆ ಗತ್ತು ಗಾಂಭಿರ್ಯ
ಇವರಿದ್ದ ಕಡೆ ಉತ್ಸಾಹಕ್ಕಿಲ್ಲ ಬರ
ಸೋಲಿಲ್ಲದ ಸರದಾರ ಇವರೇ ನಮ್ಮ ಚಂದ್ರಶೇಖರ

ಮಡದಿಗೆ ಪ್ರೀತಿ ಹಮ್ಮೀರ
ಬಂಧು ಬಾಂಧವರ ಮುದ್ದಿನ ಚಂದ್ರ
ಮಕ್ಕಳಿಗೆ ಇವರಾಗಿದ್ದರು ಜೀವನಾಧಾರ
ಇವರೇ ನಮ್ಮ ಚಂದ್ರಶೇಖರ

ಇವರ ಯೋಜನೆಗಳು ಜಗತ್ತಿಗೆ ಮಂಗಳಕರ
ಇವರ ಸಮಾಜಸೇವೆಗೆ ಇರಲಿ ನಮ್ಮೆಲ್ಲರ ಜೈಕಾರ
ಉತ್ತರ ಕರ್ನಾಟಕದ ಹೆಮ್ಮೆಯ ಧೀರ
ಇವರೇ ನಮ್ಮ ಚಂದ್ರಶೇಖರ

ವೃತ್ತಿಯಲ್ಲಿ ಡಾಕ್ಟರ್
ಮನಸ್ಸು ಮಗುತರ
ಪ್ರೀತಿ ವಾತ್ಸಲ್ಯಕ್ಕೆ ಇವರೇ ಕಡಲತೀರ
ರಾಜಕೀಯ ಕ್ಷೇತ್ರದ ರಣಧೀರ
ನಮ್ಮೆಲ್ಲರ ಮನದಲ್ಲಿ ಇವರು ಸದಾ ಅಜರಾಮರ
ಇವರೇ ನಮ್ಮ ಚಂದ್ರಶೇಖರ


ಮಹಾಲಕ್ಷ್ಮೀ ಸಾಂಬ್ರಾಣಿ

7 thoughts on “ಮಹಾಲಕ್ಷ್ಮೀ ಸಾಂಬ್ರಾಣಿ ಕವಿತೆ-ನಮ್ಮನೆಯ ಧೀರ

  1. ನಮ್ಮ ಮನೆಯ ಮಹಾಲಕ್ಷ್ಮಿ ಬರವಣಿಗೆಯಲ್ಲಿ ಸರಸ್ವತಿ

  2. Very beautifully explained the nature and personality of my brother in the poetic language.Keep it up Mahalakshmi.
    Really happy to know that you are having such a talent of poet.Congratulations.

  3. ನಮ್ಮ ಮನೆಯ ಸೊಸೆ ನನ್ನ ಕಾಕಾನ ಬಗ್ಗೆ ಬರೆದ ಕವಿತೆ ಬಹಳ ಅದ್ಭುತವಾಗಿದೆ ಹಾಗೂ ನಿಜಸ್ವರೂಪ ನಿನಗೆ ತುಂಬಾ ಧನ್ಯವಾದಗಳು

Leave a Reply

Back To Top