ಡಾ ಸಾವಿತ್ರಿ ಕಮಲಾಪೂರ ಕವಿತೆ ಗ್ರಹಣ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ

ಗ್ರಹಣ

ದಿನವೂ ಗ್ರಹಣ
 ಚಂದಿರನಿಗೆ
ನೋಡಬಾರದಂತೆ ಮೊಗ
ನೆರಳು ಸೋಕಿದರೆ
ಹುಟ್ಟುವ ಮಕ್ಕಳು
ಅಂಗವಿಕಲವಂತೆ

ಈಗ ಹುಟ್ಟಿದ ವಿಕಲಚೇತನ
ಮಕ್ಕಳೆಲ್ಲ ಚಂದಿರನ ಗ್ರಹಣವೇ
ಕಾರಣ ಅನ್ನಬೇಕೇ?
ಗ್ರಹಣ ಕ್ಕಿಂತ ಮುಂಚೆ ಊಟಮಾಡಬೇಕಂತೆ

ಮುದುಕರು ಮಕ್ಕಳು ರೋಗಿಗಳು ಊಟ ಮಾಡಬಹುದಂತೆ
ಬರೀ ದೋಷ
ಗಟ್ಟಿ ಮುಟ್ಟಾದ ದೇಹಕ್ಕೆ
ಸುತ್ತಿಕೊಂಡು ಬರುವ ಗ್ರಹಗತಿ
ಇದು ನಮ್ಮ ಜ್ಯೋತಿಷಿಗಳ ವಾಣಿ



ಹಿಟ್ಟಿನ ಡಬ್ಬಿಯಲ್ಲಿ
ಕಾರದ ಡಬ್ಬಿಯಲ್ಲಿ
ನೀರಿನ ಕೊಡದಲ್ಲಿ
ಹಾಕಿಡಬೇಕಂತೆ ತುಳಸಿ
ಮನೆಯ ಮುಂದೆ ಮೊಸರು
ಮನೆಯ ಒಳಗೆ ದೀಪದ ಸಾಲು
ಹಚ್ಚಿಡಬೇಕಂತೆ
ಲಕ್ಷ್ಮೀಗಾಗಿ ಕಾಯುವಳಂತೆ
ವರ್ಷ ಪೂರ್ತಿ

ದಿನಸಿ ಅಂಗಡಿಯವನಿಗೆ ಲಾಭ
ಮನೆಯ ಒಡತಿಗೆ ವಿರಾಮ
ಚಂದಿರನಿಗೆ ವರುಷ ತುಂಬ
ಗ್ರಹಣ ಬಂದರೇನು ?
ಹುಣ್ಣಿಮೆ ಅಮಾವಾಸ್ಯೆ
ಅಜ್ಜ ನೆಟ್ಟ ಮರಕ್ಕೆ ನೇತು ಬೀಳಬೇಕಷ್ಟೇ

ಗ್ರಹಣ ದೋಷ ವಿಲ್ಲವಂತೆ
ಮೇಷ ಮಿಥುನ ಕನ್ಯಾ ಮೀನ
ಪಾಪ ಉಳಿದ ರಾಶಿಯವರಿಗೆ ಅದಾವ ಕರ್ಮ ನೋಡಿ
 ನೋಡಬಾರದಂತೆ ಚಂದ್ರನನ್ನು
ಚೌತಿಯ ಗಣೇಶ
ಶಾಪ ವಂತೆ
ಶಮಂತಕ ಮಣಿಯನು
 ಕದ್ದ ಕೃಷ್ಣ  ಕೇಳಬೇಕಂತೆ
ಈ ಕಥೆಯನು

ಅದೆಷ್ಟು ಜನ ಹೋಗಿ ಬಂದರು
ಚಂದಿರನ ಅಂಗಳಕೆ
ನನಗಷ್ಷೇ ದೋಷ
ಗ್ರಹಣ ಯಾವಾಗ
ಬಿಡುವುದೋ ?ಕಾಯಬೇಕು
ಚಂದಿರನೇ  ಹಾಕಿ ಬಿಟ್ಟ ಶಾಪ ನೋಡದಿರು ಮೊಗವೆಂದು
ಅದೆಷ್ಟೋ ಮೊಗವು ನಗುತ್ತಿವೆ ಕುಲುಕುಲು ಕಲರವ
ಜೈ ಕಾರ ನನಗಷ್ಷೇ ದಿಕ್ಕಾರ
ನನಗೆ ನಾನೇ ಹಾಕಿಕೊಂಡೆ ಬೀಗ

 ಬಾಯಿ ಬಿಟ್ಟೆ
ಗ್ರಹಣದ ಚಂದಿರ ನಿಗೆ
ದೋಷ ಅಂತಾ
ಈಗ ದೂರ ಬಹೂ ದೂರ ಕಾಣಬೇಕು ಒಮ್ಮೆ ನಾನೂ
ವಿಜ್ಞಾನಿಯಾಗಿ
ಕಂಡು ಹಿಡಿಯಬೇಕು
ಸಂಶೋಧನೆ
ಚಿತ್ರ ವಿಚಿತ್ರ ಮನಗಳಿಗೆ  ಮೂಡಿಸಬೇಕು ಗ್ರಹಣದ ಅರಿವು
—————————————-

ಡಾ ಸಾವಿತ್ರಿ ಕಮಲಾಪೂರ

Leave a Reply

Back To Top