ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ

ಐಸಿರಿಯ ನೆಲೆ

ಬಾನಿಂದ ಗುಡುಗು ಮಿಂಚು ವೇದಘೋಷದೊಂದಿಗೆ ವರ್ಷಾಧಾರೆ ಇಳಿಯದೆ ಇಳೆಗೆ ಹರ್ಷ ತರದು..
ಚೆಂದದ ನುಡಿ ಕಟ್ಟಿ ಹಸಿರು ಜನಪದ ಸಂಪತ್ತ
ನಾಡಿನಾದ್ಯಂತ ಪಸರಿಸಾದೇ ವಸುಂಧರೆಗೆ ಕಳೆ ಕಟ್ಟದು..//೧//

ಬರಗಾಲ ಆಗಮಿಸಿ ಕಾವು ವೇರಿರುವ ಮಾತೆ ಕಾವೇರಿ
ಕಾಲಕ್ಕಾದರೂ ಜುಳು ಜುಳು ನಾದವಾಗಿ ಧುಮ್ಮುಕಬಾರದೇ..
ಹಸಿದ ರೈತನ ಕುಗ್ಗಿದ ಉದರ ಬಾವುಗಳಿಗೆ
ಜಯವ ತಂದು ಚಾಮುಂಡಿ ತಾಯಿ ಕಾರುಣ್ಯವಾ ತೋರಬಾರದೇ..//೨//

ನಿಸ್ವಾರ್ಥ ಸೇವಕರಿಗೆ ಶತ್ರುಗಳು ಅಧಿಕ
ನಡೆ ಬುದ್ದನಂತೆ ಗುರಿಯ ಕಡೆಗೆ ಬಿಡದೇ ..
ಅಂಜದಿರು ಅಳುಕದಿರು ನಿಂದನೆಯ ಈ ಜಗಕೆ
ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ..//೩//

ಕಲೆ ಸಾಹಿತ್ಯ ವಿಜ್ಞಾನ ವೀರ ಕಲಿಗಳ ನಾಡಿದು
ರಾಜ ಮಹಾರಾಜರು ಪೂಜಿಸಿದ ಶಿಲ್ಪಿಗಳ ಕಲೆಯಿದು..
ವಿಶಿಷ್ಟ ರಾಜಕಾರಣಿಗಳ ತಜ್ಞರ ನೆಲೆಯು
ರಂಗನಾಥನ ದೇಗುಲವು ವಿಶಿಷ್ಟ ಐಸಿರಿಯ ಗುಡಿಯು..//೪//


ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ

About The Author

Leave a Reply

You cannot copy content of this page

Scroll to Top