ಮಕ್ಕಳಿಗಾಗಿ ಚಿಕ್ಕ ಕಥೆ-ಕರಾಳ ದಿನ-ದೇವಿದಾಸ ಬಿ ನಾಯಕ

ಮಕ್ಕಳ ಸಂಗಾತಿ

ದೇವಿದಾಸ ಬಿ ನಾಯಕ

ಕರಾಳ ದಿನ

ಆರು ಜುಲೈ ಎರಡು ಸಾವಿರದ ಇಪ್ಪತ್ತ್ಮೂರರ ಮುಂಜಾನೆ ಒಂಬತ್ತು ಘಂಟೆಗೆ ಬಂದ ಮೊಬೈಲ್ ಕರೆ ನೋಡಿದಾಗ ಕನಕ ಆಶ್ಚರ್ಯ ಪಡುತ್ತಾನೆ. ಮುಂಜಾನೆ ಎಂದೂ ಮಾಡದ ಮಗನ ಕರೆ ಇದಾದ ಕಾರಣ ತಕ್ಷಣ ಎತ್ತಿ “ಹಲೋ” ಎನ್ನುತ್ತಾನೆ.ಆ ಕಡೆಯಿಂದ “ಕಿರು ದನಿಯಲ್ಲಿ ಮಗ ಹಲೋ” ಎಂದ.”ಯಾಕ ಮಗಾ ಡಲ್ ಇದ್ದಿಯಾ?ಏನಾಯ್ತು?”ಎಂದು ಕೇಳಿದ.”ಅಪ್ಪಾ ಏ…ನೂ..ಇಲ್ಲಪ್ಪ.ನಾನು ಏನೋ ಹೇಳ್ತೆ.ನೀ ಹೇದರಬೇಡಾ”ಎಂದನು ಮಗ.”ಮಗಾ ಹೇಳೋ ನಾ ಹೆದರೊಲ್ಲ ಹೇಳು”ಎಂದು ಕನಕ ಹೇಳಿದ.”ಅಪ್ಪಾ….ನಾ..ನು..ಹೀಗೆ ಸಾದಾ ಕೆರಮ್ ಆನಲೈನ್ ನಲ್ಲಿ ಆಡ್ತಿದ್ದೆ.”…..ಅಷ್ಟಕ್ಕೆ ಕಂಠದಲ್ಲಿ ಮಾತು ನಿಂತು ಬಂದ ಕಂಬನಿ ಬರದಂತೆ ನೋಡಿಕೊಂಡ ಪರಿ ಆತನ ಅಪ್ಪನ ಕಿವಿಗೆ ಕೇಳಿಸುತ್ತಿತ್ತು.ಆಲಿಸಿದ ಅಪ್ಪನು ಮೌನನಾದಾಗ…ಮಗಾ ಅವಿನಾಶನು..”ಅಪ್ಪಾ…ಮಾತಾಡು ನನ್ನಿಂದ ತಪ್ಪಾಯ್ತಪ್ಪಾ” ಎಂದು ಅತ್ತಾಗ ಅಪ್ಪಾ ಧೈರ್ಯದಿಂದ “ಸರಿ ಏನಾಯ್ತು ಅಂತಾ ಬಿಡಿಸಿ ಹೇಳು” ಎಂದನು.”ಹೇಳಿದ್ನಲ್ಲಪ್ಪ ನಾನು ಬೇಸರ ಕಳೆಯಲು ಸಧ್ಯ ಆನ್ ಲೈನನಲ್ಲಿ ಕೇರಮ್ ಆಡ್ತಿದ್ದೆ.ಅಲ್ಲೊಬ್ಬ ನನ್ನೊಂದಿಗೆ ಪರಿಚಯ ಮಾಡಿಕೊಂಡ”.ಎನ್ನುತ್ತ ಮತ್ತೆ ಸುಮ್ಮನಾದ.ಅವಿನಾಶನಿಗೆ ಮಾತನಾಡಲು ಮಾತು ಬರುತ್ತಿಲ್ಲ.ಇತ್ತ ತಂದೆಗೆ ಏನೂ ಹೇಳಲು ತೋಚುತ್ತಿಲ್ಲ.ಆದರೂ ತಾನಾಗಿಯೇ ಅಪ್ಪ ಕನಕ…”ಮುಂದೆ ಏನಾಯ್ತು?”.. ಹೇಳು ಎಂದ.”ಅವನು ನೀನ್ಯಾರು?’ ಎಂದ.”ನಾ ತಮಾಷೆಗಾಗಿ ಹೆಣ್ಣು ಎಂದೆ” ಹೀಗೆ ಮಾತು ಮುಂದುವರೆದು ಆಮೇಲೆ ಸತ್ಯವನ್ನೇ ಹೇಳಿದೆ.ಅದಕ್ಕವನು  “ನೀನ್ಯಾಕೆ ಸುಳ್ಳು ಹೇಳ್ದೆ? ನಿನ್ನಪ್ಪನಿಗೆ ಹೇಳ್ತಿನಿ.ನಿನ್ನ ಅಶ್ಲೀಲ ಫೋಟೋಗಳನ್ನು ನಾನೇ ತಯಾರಿಸಿ ಕಳಿಸುತ್ತೇನೆ ಎಂದ.
” ಹೆದರಿದ ನಾನು ಏನೂ ತೋಚದೆ,ನನ್ನನ್ನು ಕ್ಷಮಿಸು ಅಪ್ಪನಿಗೆ ಏನೂ ಕಳಿಸಬೇಡ,ಏನನ್ನೂ ಹೇಳಬೇಡ” ಎಂದೆ ಎಂದನು. ಆತ ಪ್ರತ್ಯುತ್ತರವಾಗಿ “ಹಾಗಿದ್ದರೆ ನನಗೆ 2000ರೂಪಯಿ ಪೇ ಮಾಡು” ಎಂದನು.”ನಾನು ಉಪಾಯವಿಲ್ಲದೆ ಒಪ್ಪಿಕೊಂಡು ಅವನಿಗೆ ಕೊಡುವಗೋಸ್ಕರ ಹಣ ಫೋನ ಪೇ ಮಾಡಲು ಹೇಳಿದೆ.ತಪ್ಪಾಯ್ತಪ್ಪಾ ಇನ್ಮುಂದೆ ನಾನು ತಪ್ಪು ಮಾಡೊಲ್ಲ.ಇದರಿಂದ ನಾನೇ ಪಾಠ ಕಲಿತೆ”.ಎಂದನು ಅವಿನಾಶ.ಅಳುತ್ತ ಅಪ್ಪ ಕನಕ “ಮಗಾ ನಿನ್ನೆ ಹಣ ನಿನಗೆ ಫೋನ್ ಪೇ ಮಾಡಿದ ಮೇಲೆ ನಿನ್ನ ಅಮ್ಮನಿಗೆ ನೀನು ಈ ಸಲ ಬೇಗ ಹಣ ಕೇಳಿದ್ದಕ್ಕೆ ” ನೋಡೆ ಮಗಾ ಹಣ ಬೇಗ ಕೇಳಿದ್ದಾನೆ.ನೀನು ಒಮ್ಮೆ ವಿಚಾರಿಸು” ಎಂದಾಗ ಹುಸಿ ನಗೆ ಬೀರಿದ ನಿನ್ನಮ್ಮ “ಅಲ್ರಿ ಅವ್ನ ಮೇಲೆ ಅನುಮಾನನಾ”?….” ‘ಅವ್ನು ಒಳ್ಳೆ ಮಗಾರಿ’ ಅಂದ್ಲು.”ಎಲ್ರಿಗೂ ನಾ…ನೇ..ನಿನ್ನಪ್ಪ ಕೆಟ್ಟವ್ನು” ಎಂದು ಅಪ್ಪ ಕನಕ ಗೋಳೊ ಎಂದು ಕಣ್ಣೀರು ಹಾಕುವುದನ್ನು ಕೇಳಿ,ಅತ್ತ ಮಗಾ ಅವಿನಾಶ..”ಅ..ಪ್ಪ…..ಅಪ್ಪಾ…ಅ…..ಪ್ಪಾ…..ಅಮ್ನಿಗೆ ಹೇಳ್ಬೇಡ….ತಂಗಿಗೂ ಹೇಳ್ಬೇಡ.ನನಗೆ ದಾರಿ ತೋರಿಸಪ್ಪ.ಕ್ಷಮಿಸಪ್ಪ” ಎಂದು ಗೋಗೆರೆದನು.ಮೊದಲಿನಿಂದಲೂ ಕಲ್ಲು ಹೃದಯದ ಕನಕ ತ್ಯಾಗ,ಸಹನೆ ಹಾಗೂ ಧೈರ್ಯಕ್ಕೆ ಹೆಸರುವಾಸಿ.”ಆಯ್ತು ನಾನಿದ್ದಿನಿ ನೀನು ಇಂದೇ ಹೊರಡು” ಎಂದನು ಕನಕ.”ಹು…ಕಾಲೇಜಿಗೆ ರಜೆ ಇದೆ.ವಿಪರೀತ ಮಳೆ ಬೇರೆ” ಎಂದನು.”ಹೆದರಬೇಡ ಬಾ ಭಟ್ಕಳ ತನಕ ಕಾರ ತರ್ತಿನಿ.ನೀನು ಅಲ್ಲಿಗೆ ಬಾ” ಎಂದು ಅಪ್ಪ ಹೇಳಿದ.ಕಛೆರಿಯಲ್ಲಿರುವ ಕವಿತಾ ವಿಷಯ ತಿಳಿದವಳೆ ಕನಕನಿಗೆ ಸಲಹೆ ಕೊಟ್ಟು ಧೈರ್ಯ ತುಂಬಿ ಕಳಿಸುತ್ತಾಳೆ.ಒಪ್ಪಿಕೊಂಡ ಮಗಾ ಆ ಕಡೆಯಿಂದ ಹೊರಟ.ತಂದೆ ಈ ಕಡೆಯಿಂದ ಹೋಗುತ್ತಾನೆ.
ಆಲೋಚಿಸುವಂತಹ,ಭಯಂಕರವಾದ ಈ ಚಕ್ರವ್ಯೂಹದಿಂದ ಪಾರಾಗುವಂತಹ ಯೋಚನೆ ಮಾಡಿ ಯೋಜನೆ ತಲೆಯಲ್ಲೇ ಸಿದ್ಧಪಡಿಸಿಕೊಂಡ ಕನಕ ಭಟ್ಕಳದಿಂದ ಮಗನನ್ನು ಕರೆದು ತರುತ್ತಾನೆ.ಹೆದರಿ ಬೇಸತ್ತ ಮಗನ ಮುಖ,ಸುಸ್ತಾಗಿ ಏನೋ ಗಂಭೀರ ಆಲೋಚನೆಯಲ್ಲಿರುವ ಗಂಡನ ಮುಖ ನೋಡಿದ ಮನೆಯಲ್ಲಿರುವವರಿಗೆ ಅನುಮಾನ ಕಾಡುವುದು ಸಹಜ.ಅಮ್ಮನ ಪ್ರಶ್ನೆಗೆ ಅವಿನಾಶ “ಆರಾಮ ಇಲ್ಲ..ಮತ್ತೆ…ಕಾಲೇಜಿಗೆ ರಜೆ…ಮಳೆ” ಅದ್ಕೆ ಬಂದೆ” ಎನ್ನುತ್ತಾನೆ.”ಮಗಾ ನಿಜ ತಾನೇ”ಎಂದು ಅಮ್ಮ‌ಮರು ಪ್ರಶ್ನೆ ಹಾಕಿದಾಗ..ಗಂಡ ಕನಕ ಹೆಂಡತಿ ಕಮಲಾಳಿಗೆ ಮಗನ ಉತ್ತರವನ್ನೇ ಪುನರುಚ್ಚರಿಸುತ್ತಾನೆ.
ಕನಕ ತುಂಬಾ ಬುದ್ಧಿವಂತ. ಆರಕ್ಷಕರ ಬಳಿ,ಇತರೆ ತಿಳಿದವರ ಹತ್ತಿರ ಚರ್ಚಿಸಿದಾಗ ಎಲ್ಲರ ಉತ್ತರ ಒಂದೇ ಆಗಿತ್ತು.ಅದೇನೆಂದರೆ “ಗೂಗಲ್ ಅಕೌಂಟ್, ಇ..ಮೇಲ್ ಆಯ್.ಡಿ. ಮತ್ತೆ ಸಿಮ್ ಬದಲಾವಣೆ” ತಕ್ಷಣ ಮಾಡಿಸಿ ಎಂದಾಗ ಕನಕ ಇವರೆಲ್ಲರ ಸಲಹೆಯಂತೆ ಮೊಬೈಲ್ ನಿಂದ ಹಿಡಿದು ಸಿಮ್ ವರೆಗೆ ಎಲ್ಲವನ್ನು ಬದಲಾಯಿಸುತ್ತಾನೆ.ಹುಬ್ಬಳ್ಳಿಯಲ್ಲಿ ಬೆಳೆದ ಕನಕನಿಗೆ ಇದು ಜುಜಬಿ ವಿಷಯವಾಗಿತ್ತು.ಮೋಸಗಾರನ ಭವಿಷ್ಯ ಹಾಳಾಗದಿರಲೆಂದು ಸೈಲಂಟಾಗಿದ್ದ.
ಮೂರು ದಿನ ಕಳೆಯಿತು. ಕನಕ ಮಗನಿಗೆ ಬಿಟ್ಟು ಕಾಲೇಜ್ ಉಪನ್ಯಾಸಕರಿಗೆ ಭೇಟಿ ಆಗಿ ಮತ್ತೆ ಮಗ ಅವಿನಾಶನಿಗೆ..”ವಿನಾಶವಾಗುವಂತಹ ಯಾವುದೇ ಕೆಲಸ ಮಾಡಬೇಡ.ಒಂದ ವೇಳೆ ಆಯ್ತ್ ಅಂತಾ ಇಟ್ಕೊ ಅಪ್ಪ ನಾಶ,ನಮ್ಮ ಬದುಕೇ ಸರ್ವನಾಶ.ಮುಂದೆ ಅಪ್ಪಿ..ತಪ್ಪಿ ಹೀಗಾದರೂ ನಾನು ನಿನಗೆ ಸಿಗೊಲ್ಲ” ಎಂದನು.ಹತಾಶೆಯ ಮಾತು ಹೇಳಿದಾಗ ಮಗಾ  ಮೌನವಾಗಿ ಉತ್ತರ ನೀಡಿದ.ಅವಿನಾಶನಿಗೆ ಬಿಟ್ಟು ಹೊರಟು ಬಂದವನಿಗೆ ಆಶ್ಚರ್ಯ ಕಾದಿತ್ತು.ಮಗನ ಹಿಂದಿನ ಮೊಬೈಲ್ ತೆರೆದಾಗ…”ನನ್ನ ಕೂಡುವಿಕೆಯು ಬಿಡಬೇಡ…ನನ್ನನ್ನು ಹತಾಶೆಯನ್ನಾಗಿ ಮಾಡಬೇಡ.” ಎಂಬ ಮೆಸೆಜು 2000 ರೂಪಾಯಿ ಪಡೆದು ಮೋಸ ಮಾಡಿದ ಮೋಸಗಾರ ಬಿಟ್ಟಿದ್ದ.”ಮಗನ ಹೊಸ ಸಿಮ್ ಈ ಚಕ್ರವ್ಯೂಹ ಬೇಧಿಸಿ ಮಗನಲ್ಲಿ ಲವಲವಿಕೆ ತುಂಬಿದಕ್ಕೆ ಧನ್ಯವಾದ ಹೇಳಿ,ಹಳೆ ಸಿಮ್ ಗೆ ಗುಡ್ ಬಾಯ್” ಹೇಳಿದ.
ಒಂದು ದಿನ  ಉಪನ್ಯಾಸಕರು ಅವಿನಾಶನಿಗೆ ಕರೆದು ಬುದ್ಧಿ ಹೇಳುವಾಗ..”ಅವಿನಾಶ ನೀನು ವಿದ್ಯಾವಂತ,ಬುದ್ಧಿವಂತ ಮೇಲಾಗಿ ಒಳ್ಳೆ ಚಿತ್ರ ಕಲಾವಿದ ಆಗೋದೆಲ್ಲ ಒಳ್ಳೆಯದು. ಈಗಾಗಲೇ ಚಿಕ್ಕ ಘಟನೆ ನಡೆದು ನಿನ್ನ ಬದುಕಿಗೆ ಉತ್ತಮ ತಿರುವು ನೀಡಿದೆ.ಅಪ್ಪ..ಅಮ್ಮರ ಹೃದಯ ಒಡೆಯುವಂತಹ ಕೆಲಸ ಮಾಡಬೇಡ” ಎಂದರು.”ಕ್ಷಮಿಸಿ ಸರ್ ಖಂಡಿತ ಇನ್ಮುಂದೆ ಇಂತಹ ತಪ್ಪು ಮಾಡೊಲ್ಲ.” ಎಂದು ಹೇಳಿ ಕ್ಲಾಸಿಗೆ ಹೋಗುತ್ತಾನೆ.ಉತ್ತಮ ಸಂಸ್ಕಾರ, ಶಿಸ್ತು ಬೆಳೆಸಿಕೊಂಡ ಅವಿನಾಶ ತಾ ಮಾಡಿದ ತಪ್ಪು ತಾನೇ ಅರ್ಥೈಸಿಕೊಂಡು,ತಂದೆಗೆ ತಿಳಿಸಿ ಸಹಾಯ ಪಡೆದು ಹೊಸದಾರಿಗೆ ಹೆಜ್ಜೆ ಇಡಲು ಮುಂದಾದ.ಒಂದವೇಳೆ ಹೆದರಿದ ಹೊಡೆತಕ್ಕೆ,ಆ ಮೋಸಗಾರನ ತಾಳಕ್ಕೆ ತಕ್ಕಂತೆ ಕುಣಿಯುತ್ತ ಹೋದರೆ,ಕೊನೆಗೊಂದು ದಿನ ಆತ್ಮಹತ್ಯೆಗೊ_ಇನ್ಯಾವುದೋ ಕಾರ್ಯಕ್ಕೆ ಬಲಿಯಾಗುತ್ತಿದ್ದ.ಆದರೂ ಆ ಒಂದು ಕ್ಷಣಗಳು.ಆ ಒಂದು ಮಾಡಿದ ತಪ್ಪು.ಆ ಮೋಸಗಾರನು ಬೀಸಿದ ಬಲೆ,ಒಂದೆರಡು ದಿನ ಮನ ತಲ್ಲಣಿಸಿ,ಹೃದಯದ ಉಸಿರಾಟ ಏರುಪೇರು ಮಾಡಿಸಿ,ಅಪ್ಪ..ಮಗನ ಕಣ್ಣಲ್ಲಿ ನೀರು ಬರುವಂತೆ ಮಾಡಿಸಿ,ಗೊತ್ತಿಲ್ಲದ ನಂಬರಿನ ಕರೆ‌ ಬಂದಾಗ ಅಪ್ಪ..ಮಗಾ ಸತ್ತು ಬದುಕುವಂತೆ ಮಾಡಿ,ಪ್ರತಿ ಹೆಜ್ಜೆಗೂ ಆತನ ನೆನಪಿರುವಂತೆ ಮಾಡಿದ,ಆ ಮೋಸಗಾರನ ಆ ದಿನ “ಕರಾಳ ದಿನ” ವಾಗಿ ಕಾಡುವಂತೆ ಮಾಡಿತು.


ದೇವಿದಾಸ ಬಿ ನಾಯಕ 

3 thoughts on “ಮಕ್ಕಳಿಗಾಗಿ ಚಿಕ್ಕ ಕಥೆ-ಕರಾಳ ದಿನ-ದೇವಿದಾಸ ಬಿ ನಾಯಕ

  1. ಇಂದಿನ ಮಕ್ಕಳು ತಮಗೆ ತಿಳಿಯದೆ ಇಂತಹ ವಿಷ ಅರ್ತುಲದಲ್ಲಿ ಸಿಲುಕಿಕೊಂಡು ಒದ್ದಾಡುತ್ತಾ ರೆ. ಕೆಲವೊಮ್ಮೆ ಆತ್ಮಹತ್ಯೆಗೂ ಕಾರಣವಾಗುತ್ತದೆ. ಕಾರಣ ಮೊಬೈಲ್ ಸಿಕ್ಕ ತಕ್ಷಣ ಕುತೂಹಲಕ್ಕೆ ಬೇರೆ ಬೇರೆ ಅಪ್ಲಿಕೇಶನ್ ಡೌನ್ ಲೋಡ್ ಮಾಡೋದು ವಯಕ್ತಿಕ ವಿಶಾರ ಹಂಚಿಕೊಳ್ಳುವ ಗುಣ ಬಿಡಬೇಕು. ಉತ್ತಮ ಕಥೆ ಸರ್

  2. ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಬೆಳವಣಿಗೆ ಹೆಚ್ಚಾದಂತೆ ಅದರ ದುರುಪಯೋಗ ಕೂಡ ಹೆಚ್ಚಾಗುತ್ತಿದೆ.ಜೊತೆಜೊತೆಗೆ ಸಾಮಾಜಿಕ ಜಾಲತಾಣಗಳ ದುರುಪಯೋಗ ಕೂಡ ಮಿತಿಮೀರಿದ ಹಂತ ತಲುಪಿದೆ.ಶ್ರೀ ದೇವಿದಾಸ ನಾಯಕರು ರಚಿಸಿರುವ ಕರಾಳ ದಿನ ಸಣ್ಣ ಕಥೆಯು ಇದಕ್ಕೆ ಒಂದು ಸೂಕ್ತ ಉದಾಹರಣೆಯಂತಿದೆ.ಅರಿಯದೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡ ಅವಿನಾಶ್ ಅದರಿಂದ ಹೊರಬರಲು ಕಷ್ಟಪಡುತ್ತಾನೆ.ಇಂತಹ ಸಮಯದಲ್ಲಿ ಅವನ‌ ತಂದೆ ಕನಕ ಅವರು ತೋರಿದ ಸಹನೆ ಮತ್ತು ಜಾಣ್ಮೆಯ ವರ್ತನೆ ಅವನನ್ನು ಸಮಸ್ಯೆಯ ಸುಳಿಯಿಂದ ಹೊರಬರುತ್ತಾನೆ. ಇದರಲ್ಲಿ ಎರಡು ಬಗೆಯ ನೀತಿಗಳಿರುವುದನ್ನು ಕಾಣಬಹುದಾಗಿದೆ.ಮನುಷ್ಯ ಎಚ್ಚರಿಕೆ ತಪ್ಪಿದಾಗ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಇದನ್ನು ತಪ್ಪಿಸಲು ಎಚ್ಚರಿಕೆಯ ಹೆಜ್ಜೆಗಳನ್ನು ಇಡುವುದು ಅಗತ್ಯ ಎಂದು ಹೇಳುತ್ತಲೇ…ಸಮಸ್ಯೆಯಲ್ಲಿ ಸಿಲುಕಿದವರಿಗೆ ನೆರವಾಗಬಲ್ಲವರು ವಹಿಸಬೇಕಾದ ತಾಳ್ಮೆಯ ಅಗತ್ಯತೆಯನ್ನು ತಿಳಿಸುತ್ತದೆ.ಒಟ್ಟಾರೆಯಾಗಿ ಈ ಕಥೆ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ಸಾರಿದೆ.ಕಥೆಯ ರಚನಾ ಶೈಲಿ ಸರಳ ಮತ್ತು ಸೂತ್ರಬದ್ಧವಾಗಿದೆ.ಕಥೆಗಾರರಿಗೆ ನನ್ನ ಅಭಿನಂದನೆಗಳು.

  3. ಅಕ್ಷರಶಃ ಸತ್ಯ, ಮೋಸದ ಛಾಯೇ ಬದುಕಿನ ಎಲ್ಲ ಅನಾಹುತಗಳಿಗೆ ಕಾರಣ…ಆದಷ್ಟು ಎಚ್ಚರಿಕೆಯಿಂದ ಸದ್ಗುಣ ಗಳಿಸುವಲ್ಲಿ ಸಾಗಬೇಕು. ನೈಸ್

Leave a Reply

Back To Top