ಸುಧಾ ಪಾಟೀಲ್ ಕವಿತೆ ಪಾವನವಾಯಿತು

ಕಾವ್ಯ ಸಂಗಾತಿ

ಸುಧಾ ಪಾಟೀಲ್ ಕವಿತೆ

ಪಾವನವಾಯಿತು

ಬಸವಣ್ಣನ  ನಾ
ಅರಿತಾಗ
ಮಹಾದೇವಿಯಕ್ಕನ
ತಿಳಿದಾಗ
ಮಡಿವಾಳ  ಮಾಚಯ್ಯನ
ಭಕ್ತಿ ರಸ  ಪ್ರವಾಹದಲಿ
ಪಾವನವಾಯಿತು
ನನ್ನೀ  ಜೀವನ

ಮಹಾಜ್ಞಾನಿ  ಚೆನ್ನಬಸವಣ್ಣನವರ
ಚಿತ್ತ ಮನ  ಭಾವಗಳ
ಅಳವಡಿಸಿಕೊಂಡು
ಸಿದ್ಧರಾಮೇಶ್ವರರ
ಕರ್ಮಯೋಗವನ್ನು
ಪರಿಪಾಲಿಸಿ
ಪಾವನವಾಯ್ತು
ನನ್ನೀ  ಜೀವನ



ಅಲ್ಲಮರ  ವೈರಾಗ್ಯಕ್ಕೆ
ನಾ  ಮಣಿದು
ಮಾದಾರ  ಚೆನ್ನಯ್ಯನವರ
ನಡೆ ನುಡಿ  ಒಂದಾದದ್ದು
ಡೋಹರ  ಕಕ್ಕಯ್ಯನವರ
ಆಸೆ  ಆಮಿಷಗಳು  ಅಳಿದದ್ದು
ತಿಳಿಯುತ
ಪಾವನವಾಯಿತು
ನನ್ನೀ  ಜೀವನ

ಜೇಡರ  ದಾಸಿಮಯ್ಯನವರ
ನಿರ್ಮೋಹ  ಭಕ್ತಿ
ಅಂಗವು  ಲಿಂಗವಾಗುವುದ
ಸುಲಭೋಪಾಯವನ್ನು
ತೆರೆದಿಟ್ಟ  ಆದಯ್ಯ  ಶೆಟ್ಟಿಯ
ಪರಮಾನಂದವನ್ನು ನೋಡಿ
ಪಾವನವಾಯ್ತು
ನನ್ನೀ  ಜೀವನ

ಅದು ಬೇಕು ಇದು ಬೇಕು
ಎಂಬ  ವಾಂಚಲ್ಯ  ಬೇಡ
ಎನ್ನುವ  ಸಕಲೇಶ  ಮಾದರಸರ
ತತ್ವವ  ನೋಡಿ
ಅಂಬಿಗರ  ಚೌಡಯ್ಯನವರ
ಮಾಯೆಯ  ತೊಡೆಯುವ
ಗುಣವ  ನೋಡಿ
ಪಾವನವಾಯ್ತು
ನನ್ನೀ  ಜೀವನ

ಮೇದಾರ  ಕೇತಯ್ಯನವರ
ಪಂಚೇದ್ರಿಯಗಳ  ಹತೋಟಿಯ
ಅರಿತು
ಕಿನ್ನರಿಯ  ಬ್ರಹ್ಮಯ್ಯನ
ಗುರು  ಲಿಂಗ ಜಂಗಮದ
ಆಳವಾದ  ಜ್ಞಾನವ ತಿಳಿದು
ಪಾವನವಾಯ್ತು
 ನನ್ನೀ  ಜೀವನ


ಸುಧಾ ಪಾಟೀಲ್

Leave a Reply

Back To Top