ಕಾವ್ಯಸಂಗಾತಿ
ವೈ.ಎಂ.ಯಾಕೊಳ್ಳಿ ದಿನದ ಹೈಕು
ಹೊರಹೊರಗೆ
ಹೇಳುದಲ್ಲ ನಿಯಮ
ಸ್ವತಃ ಆಗೋದು
ಅವಳ ಮಾತು
ನೇರಕ್ಕೆ ಬಿಟ್ಟ ಬಾಣ
ಗುರಿ ತಪ್ಪದು
ರಾಕ್ಷಷ ನಾಶ
ಹೊರಗೆ ಅಷ್ಟೇ ಅಲ್ಲ
ಒಳಗೂ ಸಹ
ಮಾಗಲು ಹಣ್ಣು
ಗಿಡದೊಳು ನಿಲ್ದದು
ಹಸಿವಿಗನ್ನ
ಬರೀ ಬಡಾಯಿ
ಬೇಡಿದವರಿಗಿಲ್ಲ
ಬಿಡಿ ಕಾಸನು
ಸೀರೆಯಂಗಡಿ
ತುಂಬ ಎಳೆ ಕನಸು
ದಿನ ಮಾರಾಟ
ಸೀರೆ ಮಾರುವ
ಯುವತಿ ತೊಟ್ಡಿಲ್ಲ ಆ
ಸೀರೆ ಒಂದಿನ
ಪ್ರತಿಮುಂಜಾನೆ
ಹೊಸ ಅವಕಾಶ ತಾ
ಪಕ್ವವಾಗಲು
ಬಾಗಿ ನಡೆಯೊ
ಮಾತು ಸತ್ಯವಾದದ್ದು
ಬಡಿದ ಮೇಲೆ
ಹೂವು ನಕ್ಕಿತು
ತನ್ನ ಹೊತ್ತು ಮೆರೆವ
ಅರಸಿ ಕಂಡು
ವೈ.ಎಂ.ಯಾಕೊಳ್ಳಿ