ಸುಪ್ತದೀಪ್ತಿರವರ ಕವಿತೆ ಪೇಪರ್ ಪೊಟ್ಟಣ

ಕಾವ್ಯ ಸಂಗಾತಿ

ಸುಪ್ತದೀಪ್ತಿ

ಪೇಪರ್ ಪೊಟ್ಟಣ

supthideepa


ಬೀದಿಬದಿಯಲ್ಲಿ ನಿಂತಿದ್ದಾನೆ ಹುಡುಗ
ಪೊಟ್ಟಣಗಳ ಕಂತೆ ಹಿಡಿದು
ಒಂದೊಂದರಲ್ಲಿಯೂ ಒಂದೊಂದು ಕಿನ್ನರಿ
ಪುಟ್ಟ ಕನಸುಗಳ ಮುಡಿದು

ನಿಮಗೆ ಬೇಕಾದ್ದನ್ನು ನೀವು ಆರಿಸಿಕೊಳ್ಳಿ
ನೆಟ್ಟಕಂಗಳಲಿ ಹುಡುಕಿ
ತೆರೆದು ಇಣುಕಿದರುಂಟು ಅಚ್ಚರಿಯ ಇಡುಗಂಟು
ಕಟ್ಟಿನಲ್ಲಿಲ್ಲ ಬೆರಕಿ

ಹಗುರ ಪೇಪರುಹಾಳೆ ಸುತ್ತೊಂದು ಚೌಕಟ್ಟು
ಪಟ್ಟಿ ಮೀರಿದ ಪದಗಳಾಟ
ಪೀನಗಾಜಿನ ಆಚೆ ಕಂಡದ್ದು ಏನಂತೆ?
ದಿಟ್ಟಿಯೊಳಗಿರಲಿ ನೋಟ

ಬೀದಿಬದಿ ಹುಡುಗನಿಗೆ ಹಸಿವೆಗಣ್ಣಲು ನಿದ್ರೆ
ಪೊಟ್ಟಣವ ಮಾರಬೇಕು
ಕನಸಕಿನ್ನರಿಯರನು ವಾರೀಸುದಾರರಿಗೆ
ಮುಟ್ಟಿಸಿಯೆ ಮಲಗಬೇಕು


ಸುಪ್ತದೀಪ್ತಿ

supthideepa

Leave a Reply

Back To Top