ಕಾವ್ಯ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ ಕವಿತೆ
ನಾವು ಮನುಜರು
ಮೈಗೆ ಅಂಟಿದ ಚರ್ಮಕ್ಕೆ
ಅದಾವ ಜಾತಿ
ನರಮಾನವರ ಜನನ ಮೂಲಕೆ ಅದಾವ ಜಾತಿ
ಹರಳಯ್ಯ ಕಲ್ಯಾಣ ಮ್ಮರ
ಪವಿತ್ರ ಪಾದುಕೆ
ಹೊತ್ತು ಕುಣಿದಾಡಿದ
ಅಣ್ಣ ಬಸವಣ್ಣ
ಮತ್ತಾರು ಇಲ್ಲ ಜಗದಲಿ
ದ್ವೇಷ ಮತ್ಸರದ ಸುಡಗಾಡ ಕೇರಿಯಲಿ
ಯಾವ ಜಾತಿ
ಮಣ್ಣು ಸೇರುವ ಎಲುಬು
ಕಿತ್ತು ತಿನ್ನುವ ಮನುಜ
ಜಾತಿ ಸುಟ್ಟು ವಗೆದ
ಅಣ್ಣ ಬಸವ ತಂದೆ
ಇನ್ನೂ ಹೋಗಿಲ್ಲ ಬಾರೋ
ಹೆಕ್ಕಿ ಮುಕ್ಕಿ ಬಡಿಯುವರು
ನಾಲಿಗೆಯಲಿ
ಇಲ್ಲ ಪರಿಶುದ್ಧತೆ
ಭೇದ ಅಳಿಸಿ ನಗಿಸಿ
ಕುಣಿಸಿದೆ ಅಂದು
ಇಂದು ಮುಗಿಲು ಮುಟ್ಟಿದೆ
ನಮ್ಮ ಧರ್ಮ ನಿಮ್ಮ ಧರ್ಮ ನೋಡುತ್ತ ಕುಳಿತ ಅಣ್ಣ ನಗುತ್ತಿರುವನು
ಹುಸಿ ನಗೆಯ ಬೀರಿ
ಅಳಿಸಲು ಬಾರೋ ಅಣ್ಣ
ನಾವು ಮನುಜರು
ಬಸವ ನಾಡಿನ ಮಕ್ಕಳು
ಅರಿವು ಆಚಾರ ಕಲಿತವರು ಬಾರೋ ಬಸವ
ಭೇದ ಅಳಿಸಿ ನಗಿಸಿ
———————————
ಡಾ ಸಾವಿತ್ರಿ ಕಮಲಾಪೂರ