ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ಗಜಲ್
( ಸೂರ್ಯಕಿರಣ ಮಾರುವ ಬಾಲೆ)
ಅಲ್ಲೊಬ್ಬ ಸೂರ್ಯ ಕಿರಣ ಮಾರುವ ಬಾಲೆ ನಿಂತಿದ್ದಾಳೆ
ಕತ್ತಲ ಓಡಿಸಿ ಇರುಳು ಬೆಳಗುವ ಪ್ರಯತ್ನ ಮಾಡುತ್ತಿದ್ದಾಳೆ
ಅವಳ ಕಣ್ಣೊ ಹೊಳೆವ ರತ್ನ ಶಿರದಿ ಅಗ್ನಿ ಜ್ವಾಲೆಯು ಇದೆ
ಹಳೆಯ ಸಂತೆ ಚೌಕದಲಿ ಆಕೆ ಮಾರುಲು ಯತ್ನಿಸುತ್ತಾಳೆ
ಬೆಳಕ ಕಿರಣ ನೀಡುವ ಇನಗೆ ಇದರಿಂದ ಬೇಸರವೇನಿಲ್ಲಾ
ಈ ನೀರೆ ಹಗಲಿನಿಂದ ಕದ್ದ ಬೆಳಕ ಮಾರಲು ಇರಿಸಿದ್ದಾಳೆ
ನೈಜ ನಿಸರ್ಗ ಸ್ವತ್ತನು ಆಕೆ ಮೂರು ಕಾಸಿಗೆ ಮಾರುತ್ತಾಳೆ
ಮೈಕಾಂತಿಯಲಿ ಸೂರ್ಯನ ಕಿರಣವನೂ ಮೀರಿಸುತ್ತಾಳೆ
ಕೃಷ್ಣಾ! ಪ್ರಕೃತಿ ವ್ಯಾಪಾರವನು ಆಸ್ವಾದಿಸಲು ಮಾತ್ರ ಸಾಧ್ಯ
ಸ್ವಾದವನು ವಿಸ್ತರಿಸುವ ವ್ಯರ್ಥ ಕೆಲಸದಿ ಈಕೆ ತೊಡಗಿದ್ದಾಳೆ.
ಬಾಗೇಪಲ್ಲಿ