ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಸಂಗಾತಿ
ಯಾರಿಗೂ ಗೊತ್ತಿರದ
ನಿರ್ಜನ ಶಾಂತ ಪ್ರದೇಶ
ನಾನು ಆಗಾಗ ಅಲ್ಲಿಗೆ
ಒಬ್ಬನೇ ಹೋಗುತ್ತೇನೆ
ಸುತ್ತಲೂ ನಿಗೂಢ
ಕುಣಿವ ಮನದ ಉತ್ಸಾಹ
ಯಾರು ನೋಡದ
ಯಾರಿಗೂ ಎಟುಕದ
ಏಕಾಂತದ ನೆರಳು
ಸುರಕ್ಷಿತ ಕ್ಷೇಮ
ನನ್ನ ಇರುವು
ದೂರದ ನೆಲದ ಮೇಲೆ
ಯಾರೂ ಲೂಟಿ
ಹೊಡೆಯದ ಭದ್ರ
ನೆಲ ಜಲ ಮರಳು
ಸುಳಿಗಾಳಿ ಹೂ ಬಿಸಿಲು
ಏನೋ ವಿಚಿತ್ರ
ಇದು ದೈವ ಲೀಲೆ
ನಾನೊಬ್ಬನೇ ನಡೆದೆ
ಹೆಜ್ಜೆ ಗುರುತು ಬಿಡದೆ
ಹೊರಗೆಡುವಿದೆ ನಾನು
ನನ್ನ ಕಣ್ಣೀರು ಸಂತಸ
ನಗೆ.ನೆಮ್ಮದಿ ನನ್ನ ಸ್ವತ್ತು
ಅಲ್ಲಿಯೇ ಹೂತು ಬಿಟ್ಟೆ
ಭಯ ಭೀತಿ ವಿಷಾದ
ಎಲ್ಲವನ್ನೂ ತೂರಿಕೊಂಡೆ
ಭಾವಗಳು ನನ್ನ ಜೀವ
ಏಕಾಂಗಿ ನಾನು
ಹೊರಗೆ ಚಿಗುರು
ಮೇಲೆ ತುಂತುರು ಮಳೆ
ಖುಷಿ ಕ್ಷಣಗಳ ಕೂಡಿಡುವೆ
ಬಿರುಕು ಭೂಮಿಯಲ್ಲಿ
ಬಿತ್ತುವೆ ಕನಸುಗಳ
ಎಲ್ಲವೂ ಸಾಧ್ಯ
ಬಯಕೆ ಮೌನದಲಿ
ಬಿಕ್ಕುತ್ತವೆ ಬಳಲುತ್ತವೆ
ಸದ್ದು ಗದ್ದಲವಿಲ್ಲ
ನನ್ನ ನಗೆ.ನನ್ನ ಕಣ್ಣೀರು
ಹೊರಗೆ ಕಾಣುವದಿಲ್ಲ
ಕೇಳುವುದಿಲ್ಲ
ಎಲ್ಲವೂ ಶಾಂತ
ನಿಷ್ಪತ್ತಿ ತೇಜ
ನಾನು ಮತ್ತೆ ಕರೆಯುತ್ತೇನೆ
ನನ್ನ ಕನಸುಗಳ ಭಾವಗಳ
ನನ್ನ ಉಸಿರಿನ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಅರ್ಥಪೂರ್ಣ ಕವನ ಸರ್
ಡಾ ವೀಣಾ ಹೂಗಾರ
ಹೃದಯ ಸ್ಪರ್ಶ ಕವನ ತುಂಬಾ ಚೆನ್ನಾಗಿ ಮೂಡಿ ಬಂದ ಭಾವ
Very philosophical poem
Ashok Koganur
Excellent poem
ವೀರೇಶ್