ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಅಪ್ಪಿ ಕೊಂಡೆವು.

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಅಪ್ಪಿ ಕೊಂಡೆವು.

ದುಷ್ಟರನ್ನು
ದೂರ ಇಡಲು
ಭ್ರಷ್ಟರನ್ನು
ಅಪ್ಪಿ ಕೊಂಡೆವು
ಕೋಮು ಕೆಸರು
ತೊಳೆಯಲೆಂದು
ಅಭಯ ಹಸ್ತ
ಹಿಡಿದೆವು

ಯಾರು ದುಷ್ಟರು
ಯಾರು ಶಿಷ್ಟರು
ಯಾರು ಭ್ರಷ್ಟರು
ಕಾಣೆವು
ಒಮ್ಮೆ ಅವರು
ಒಮ್ಮೆ ಇವರು
ಕೊಳ್ಳೆ ಹೊಡೆದರು
ನಾಡನು

ಹಲವು ಯೋಜನೆ
ಭ್ರಮೆ ಭ್ರಾಂತಿ
ಉಚಿತ ಸಾರಿಗೆ
ಅಕ್ಕಿ ಬೇಳೆ ವಿದ್ಯುತ್
ಭೂಮಿಯೊಡೆಯ
ಬಡವನಾದ
ನೆಲದಿ ದುಡಿದು
ಮುಪ್ಪುಗೊಂಡ

ಕತ್ತೆ ಕೋತಿ
ರಾಜ್ಯ ಭಾರ
ನಿತ್ಯ ಸಡಗರ
ಸಂಭ್ರಮ
ಮಳೆಯಿರದೆ
ಜನ ಬಿಕ್ಕುತಿದೆ
ದಸರೆ ದುರ್ಗೆ
ಜಂಬೂ ಸವಾರಿ

ಮಾರಿಕೊಂಡೆವು
ಚುನಾವಣೆ
ಹಣ ಹೆಂಡ ವಸ್ತು
ಪ್ರಜಾಪ್ರಭುತ್ವ
ವ್ಯಂಗ್ಯ ಪ್ರಹಸನ
ಇಲ್ಲವಾಯಿತು ಶಿಸ್ತು
ಬುದ್ಧ ಬಸವ ಗಾಂಧಿ ತತ್ವ

ಸಮಾಧಿಯೊಳಗಿನ ಮಂತ್ರವು


ಡಾ ಶಶಿಕಾಂತ ಪಟ್ಟಣ

5 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಅಪ್ಪಿ ಕೊಂಡೆವು.

  1. ವಾಸ್ತವದ ಕನ್ನಡಿ… ಎಲ್ಲರೂ ಚಿಂತನ-ಮಂಥನ ಮಾಡಿಕೊಳ್ಳಲೇಬೇಕು… ಎಲ್ಲರನೂ
    ಎಚ್ಚರಿಸಲು ಇಂಥ ಕವನಗಳು ಆಗಾಗ ಮೂಡಿ ಬರಬೇಕು…

  2. ವಾಸ್ತವದ ವಿಡಂಬನೆ, ಹಾಗೂ ಬದಲಾವಣೆ ಬೇಕು ಎಂಬ ಚಿಂತನೆ ಸೊಗಸಾಗಿದೆ ಸರ್

Leave a Reply

Back To Top