ಡಾ.ಕಸ್ತೂರಿ ದಳವಾಯಿ ಕವಿತೆ-ಬುದ್ದನೇಕೆ ನಕ್ಕ,!

ಕಾವ್ಯ ಸಂಗಾತಿ

ಡಾ.ಕಸ್ತೂರಿ ದಳವಾಯಿ ಕವಿತೆ-

ಬುದ್ದನೇಕೆ ನಕ್ಕ,!

ಯಶೋಧರ ಮಯಾ
ದೇವಿಯರ ಸುತ
ಸಿದ್ದಾರ್ಥ. ನೀನು
ಯುವರಾಜನಾಗಿ
ಮರೆಯೆಂದು
ಸೌಕುಮಾರತೆಯಲೀ
ಲೌಕಿಕದ ಅರಹು
ಅರಿಕೆಯಾಗದಿರಲೆಂದು
ಅಃತಪರದಿ ಮೆರಸಿದರು
ಆದರೆ ನೀ
ಸುಮ್ಮನೆ ಕೂರಲಿಲ್ಲಾ!
ಯೌವನದಿಬೆಳೆದು
ಬಾಳಸಂಗಾತಿ ಕೈ್ ಹಿಡಿದು
ಹೆಂಡತಿಗೆ ತಕ್ಕ ಗಂಡನಾಗಿ
ರಾಹುಲ್ ಕಂದ ಕಣ್ಣ್ಮನಿ
ಕೊಟ್ಟರಿ.ಆದರೆ
ಕಾಲಕರೆ. ನೀ.ಬುದ್ದ
ನಾಗುವ ಸಮಯ
ಬಂದೇ ಬಿಟ್ಟತು!
ನಡೆದ ಬಿಟ್ಟಿ
ಲೋಕ ಕಲ್ಯಾಣಕೆ
ಚೆನ್ನೂಡನೆ ಹಯವನೇರಿ! ಸ್ಮರಣೆಯ ಸೈ್ರಣೆಕಳ್ಳು
ಬಳ್ಳಿ.ನಿಲ್ಲಸಿತು!ಹಯದನೆಪದಿ
ನಕ್ಕು ಹೇಳಲಿಲ್ಲವೆ
ನಡೆ.ನಡೆ ಹಯವೆ
ಮುಂದಕೀಗ ತಿರುಗಿ
ಹಿಂದೇತಕೆ ನೋಡುವೆ!
ಲೋಕದಿ ಬೆನ್ನು
ಮಾಡಿ ಅಲೌಕಿದ
ಕಡೆ.ಸ್ಮಿತ ಸಿದ್ದತೆ ಯಿಂದ
“ಸ್ಥಿತಪ್ರಜ್ಣತ್ವ”
ಆಭರಣ ತೊಟ್ಟು
ಇಂದು ನೀ
ನಕ್ಕ ಮಹಾರಾಷ್ಟ್ರ ದ
ಅಜಂತಾ ಎಲ್ಲೋರಾ
ಗುಹೆಗಳಲ್ಲಿ ಇವರ
ಡೋಂಗಿಯ ಸೋಗುಲಾಡಿತಕ್ಕೆ.
ನಕ್ಕಿದ್ದಿಕ್ಕೆ ಆತ್ಮಾವಲೋಕನ
ಮಾಡಿಕೊಳ್ಳಲು ಕಲ್ಲಲ್ಲಿ
ಕಲ್ಲಾಗಿ
ಕಲ್ಲ ಮನಸ್ಸು ಮಾಡಿ
ಬುದ್ದಗಯಾದಲ್ಲಿ ವಿಶ್ವಮಾನವ
ಬುದ್ದ. ಮಾನುಷರನ್ನು
ಸೃಷ್ಟಿ ಸುತ್ತಾ….!!!!!


ಡಾ.ಕಸ್ತೂರಿ ದಳವಾಯಿ

One thought on “ಡಾ.ಕಸ್ತೂರಿ ದಳವಾಯಿ ಕವಿತೆ-ಬುದ್ದನೇಕೆ ನಕ್ಕ,!

Leave a Reply

Back To Top