ಮಹಾಂತೇಶ ಕಮತ ಹೊಲವ ಬಿತ್ತಿ ಒಳಿತು ಬೆಳಿ

ಕಾವ್ಯ ಸಂಗಾತಿ

ಮಹಾಂತೇಶ ಕಮತ

ಹೊಲವ ಬಿತ್ತಿ ಒಳಿತು ಬೆಳಿ

ಏನು ಕಂಪು ಬಹಳ ತಂಪು,
ಹಸಿರು ಎಲೆಯ ಗಿಡ ಮರ!!
ಹೊಲವ ಬಿತ್ತಿ ಒಳಿತು ಬೆಳಿ,
ಕೆಡಿಯದಿರಿ ಹೊಲವನು ಬರ!!

ಏನು ಅಂದ ಬಹಳ ಚಂದ,
ಪ್ರಕೃತಿಯ ಆ ಸೌಂದರ್ಯ!!
ಬೀಜ ಒಂದು ಫಲವು ಅಧಿಕ,
ಇದೆಲ್ಲ ಹೇಗೆ ಅಂತಾ ಆಶ್ಚರ್ಯ!!

ಕನಸು ಕಂಡು ಮನವ ತೋರು,
ಬೆಳೆಯಲು ಹೊಲದಲಿ ಗಿಡ ಮರ!!
ನೀರನು ಉಣಿಸಿ ಗಿಡವನು ಬೆಳೆಸಿ,
ಪಡೆಯಲು ಲಾಭವ ತರ ತರ!!

ನೆರಳು ನೀಡಿ ಫಲವ ಕೊಟ್ಟು,
ತಣಿಸುತಿಹದು ರೈತನ ಮನ!!
ಹೊಲದ ಬದಿಯಲಿ ಗಿಡವನೆಟ್ಟು,
ಪಡೆಯುತಿಹನು ಕರ ತುಂಬಾ ಹಣ!!

ಏನು ಕಂಪು ಬಹಳ ತಂಪು,
ಹಸಿರು ಎಲೆಯ ಗಿಡ ಮರ!!
ಕಾಯಿ ಹಸಿರು ಫಲವು ಬೇರೆ,
ಹಕ್ಕಿ-ಪಕ್ಷಿಗಳಿಗೆಲ್ಲ ಇದುವೇ ಆಸರ!!


ಮಹಾಂತೇಶ ಕಮತ

Leave a Reply

Back To Top