ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಸ್ಲಿಪ್ಪರ ಸ್ಟ್ಯಾಂಡ್
ಊರು ತಿರುಗಿದ
ಜೋಡುಗಳಿಗೊಂದು
ಸುಂದರ ತಂಗುದಾಣ,,
ಹಳೆತು ಹೊಸತು ಸರ್ವರ
ಆಶ್ರಯ ತಾಣ…!
ವಿವಿಧ ಬಗೆಯ ಬಗೆಯ
ಸ್ಲೀಪರಗಳಿವೆ,
ಆಕಾರ ಬೇರೆ ಚಿಕ್ಕದು,ದೊಡ್ಡದು
ಬಣ್ಣ ಬೇರೆ, ಪ್ರಕಾರ ಬೇರೆ
ಎಲ್ಲವೂ ಇಲ್ಲಿವೆ..
ಮನುಷ್ಯರು ಹೀಗೆ ಅಲ್ಲವೇ…!
ಮೆಟ್ಟು ಇಡಲಿಕ್ಕೆ ಒಂದು ಮೆಟ್ಟು
ಬೇಕು ಬೇಕೆಂದು ಅಜ್ಜನವಾದ,
ಅಟ್ಟದ ಮೇಲಲ್ಲ,
ಮೂಲೆಯಲ್ಲಿ ಬಿಟ್ಟುಬಿಡಿ
ಅನಾಥವಾಗಿ ಬಿದ್ದಿರಲಿ,
ಕೊನೆಗೊಮ್ಮೆ ನಾವು ಇದರಂತೆ..!
ಎಲ್ಲೂ ಒಂದೆ ಚಪ್ಪಲಿ ಹಾಕಿದವರಿಲ್ಲ,
ಹಾಕುವುದು ಇಲ್ಲ,
ಒಂಟಿತನಕೆ ಬೆಲೆಯಿಲ್ಲ,
ಜಂಟಿತನ ದೇವರೆ ಬಲ್ಲ..
ರಾಜರ ದರ್ಬಾರಿನಲ್ಲಿ
ಮೆರದದ್ದು,
ಆಫಿಸನಲ್ಲಿ ತಿರುಗಿದ ಕರಿಬೂಟು
ಇಲ್ಲೆಯಿವೆ,
ಮಗಳ ಪಿಂಯ್ ಪಿಂಯ್ ಸ್ಲಿಪರ್
ಮಗನ ಸ್ಯಾಂಡಲ್ಸ ಆಹಾ…ಅದ್ಬುತ..!
ಈ ಚಪ್ಪಲಿ ಹೊರಗೆ ಬಿಡಲು
ನಾಯಿ ಕದ್ದೊಯ್ದಿತ್ತು,
ಗೋಳಿಟ್ಟು ಮಗಳು ಅತ್ತು ಕರೆದು
ತರಿಸಿದಳೊಂದು ಸ್ಟಾಂಡ್,
ಪಕ್ಕಾ ಚೀನಾ ಬ್ರಾಂಡ್..!
ಐದು ಭಾಗಗಳಲ್ಲಿ
ಏಂಟತ್ತು ನಮೂನೆಯ
ಸ್ಲೀಪರ್ ಗಳನು ಹೊತ್ತು
ಮಾರಾಟಕ್ಕಿಟ್ಟ ಸರಕಾಗಿ
ಮುದುಕಿಯಂತೆ ಕುಳಿತಿದೆ
ನೋಡಿ ಹೇಗಿದೆ
ಸ್ಲೀಪರ್ ಸ್ಟ್ಯಾಂಡ್..!
ಶಂಕರಾನಂದ ಹೆಬ್ಬಾಳ
Nice sir