ಸುಧಾ ಪಾಟೀಲ್ ಕವಿತೆ-ಜೀವನ್ಮುಕ್ತಿ

ಕಾವ್ಯ ಸಂಗಾತಿ

ಸುಧಾ ಪಾಟೀಲ್ ಕವಿತೆ-

ಜೀವನ್ಮುಕ್ತಿ

ಪಡೆದ ಭಾಗ್ಯವ
ನಡೆದ ಹಾದಿಯ
ಪರರ ಉಪಕಾರವ
ನೆನೆವುದೇ
ಜೀವನ್ಮುಕ್ತಿ
ಜೊತೆಯಿರುವ
ಮನುಜರ
ಕಂಬನಿಗೆ
ಸ್ಪಂದಿಸಿ
ಹೊಣೆಯರಿತು
ನಡೆವುದೇ
ಜೀವನ್ಮುಕ್ತಿ
ಕಾಯಕವೇ
ಕೈಲಾಸವೆನ್ನುತ
ವಚನಾಮೃತವ
ಬೆಳಗುತ
ಲಿಂಗವೇ ನೀನಾಗಿ
ಶರಣರ ಮಾರ್ಗದಿ
ನಡೆವುದೇ
ಜೀವನ್ಮುಕ್ತಿ
ಅವರಿವರೆನ್ನದೆ
ಎಲ್ಲರೂ
ನಮ್ಮವರೆನ್ನುವ
ಭಾವಬೆಳಗು
ಮೂಡುವುದೇ
ಜೀವನ್ಮುಕ್ತಿ


ಸುಧಾ ಪಾಟೀಲ್

5 thoughts on “ಸುಧಾ ಪಾಟೀಲ್ ಕವಿತೆ-ಜೀವನ್ಮುಕ್ತಿ

  1. ಆಧ್ಯಾತ್ಮಿಕ ಸಾಧನೆ ಮಾಡಿರುವ ತಮ್ಮ ಕಾವ್ಯದಲ್ಲಿ ಕಂಡು ಬರುತ್ತಿದೆ

    ದೀಪಾ

  2. ಅರ್ಥಪೂರ್ಣ ಚಿಂತನೆ ಮತ್ತು ಕವನ

    ಶ್ರೀಕಾಂತ ಹೆಗಡೆ

  3. ನನ್ನ ಜೀವನ್ಮುಕ್ತಿಯ ಸಾರವನ್ನು ಇಷ್ಟಪಟ್ಟ
    ಕವಿಮನಸುಗಳಿಗೆ ನನ್ನ ಶರಣು

    ಸುಶಿ ( ಸುಧಾ ಶಿವಾನಂದ )

Leave a Reply