ಕಾವ್ಯ ಸಂಗಾತಿ
ಜಯದೇವಿ ಆರ್ ಯದಲಾಪೂರೆ-
ಮಿನಿಜೀವಿ ಕಲಿಸಿದ ಪಾಠ
ಮಡದಿ ಮಕ್ಕಳಿಗೆ
ಸಮಯ ನೀಡದೆ
ಬಾರು ಪಬ್ಬು ಕ್ಲಬಗಳಲ್ಲಿ
ಮೋಜು ಮಾಡುತ್ತಿದ್ದ ಮನುಜನಿಗೆ
ಕೊರೋನಾ ಕಲಿಸಿತ್ತು ಪಾಠ
ಪರಸ್ತ್ರೀ ಪರಮೇಶ್ವರಿಯೆಂದು
ಮೋಹದಲ್ಲಿ ಮುಳುಗಿದ ಮನುಜನಿಗೆ
ಮನೆಯೇ ಮಂತ್ರಾಲಯ
ಮಡದಿ ಮಕ್ಕಳೆ ಸರ್ವಸ್ವ
ಎಂಬ ಪಾಠ ಕಲಿಸಿತು ಕೊರೋನಾ
ವಿದೇಶದಿ ಓದಿ ಉದ್ಯೋಗ
ಮಾಡುತ್ತೇವೆಂಬ ಜಂಬಕೊಚ್ಚಿಕೊಳ್ಳುತಿದ್ದಗೇ
ಹಣಕ್ಕಿಂತ ಪ್ರಾಣಮುಖ್ಯವಾಗಿ
ಜನನಿ ಜನ್ಮಭೂಮಿಷ್ಯಎಂಬ
ಪಾಠ ಕಲಿಸಿತು ಕೊರೋನಾ
ವಿಜ್ಞಾನ ತಂತ್ರಜ್ಞಾನದಿ
ನಾವೆಷ್ಟು ಮಂದುವರಿದರು
ಪ್ರಕೃತಿ ಮಾತೆ ಮುಂದೆ
ತೃಣ ಸಮಾನ ಎಂಬ
ಪಾಠ ಕಲಿಸಿತು ಕೊರೋನಾ
ಮಠ ಮಂದಿರ ಮಸೀದಿ
ಗುರುದ್ವಾರ ಚರ್ಚೆಗಳು
ಬೀಗ ಜಡಿದುಕೊಂಡಿದ್ದು ಕಂಡು
ನಮ್ಮ ರಕ್ಷಣೆಗ್ಯಾವ ದೇವರು
ಬರುವುದಿಲ್ಲ ಎಂಬ
ಪಾಠ ಕಲಿಸಿತು ಕೊರೋನಾ
ದೇಹವೇ ದೇವಾಲಯ
ಅಂತರಾತ್ಮವೇ ದೇವರು
ಯೋಗಧ್ಯಾನ ಸತಸಂಗದಿಂದ್ದರೆ
ಯಾವ ರೋಗ ಬರುವುದಿಲ್ಲ ಎಂಬ
ಪಾಠ ಕಲಿಸಿತು ಕೊರೋನಾ
ಜಯದೇವಿ ಆರ್ ಯದಲಾಪೂರೆ