ಕಾವ್ಯಸಂಗಾತಿ
ಡಾ.ಅಮೀರುದ್ದೀನ್ ಖಾಜಿ
ಗಜಲ್
ಎಲ್ಲಿ ಹೋದರೂ ಏಕಾಂಗಿಯಾಗಿಸದು ನಿನ್ನ ನೆನಪು
ಎಷ್ಟೇ ಕುಡಿದರೂ ಮದಿರೆ, ಮತ್ತೇರಿಸದು ನಿನ್ನ ನೆನಪು
ಲೋಕಾಂತದಿಂದ ಗಾವುದ ದೂರ ಏಕಾಂತದಲಿರಲು
ದುಃಖ ಉಮ್ಮಡಿಸಿ ಕಣ್ಣೀರ ಹರಿಸದು ನಿನ್ನ ನೆನಪು
ಇರುಳಾದರೆ ಹಗಲಂತೆ ಬೆನ್ಹತ್ತುವದು ಬೇತಾಳವಾಗಿ
ಬೆಳಕ ಕಣ್ಚುಚ್ಚಿಸಿ ಕ್ಷಣವೂ ಮಲಗಿಸದು ನಿನ್ನ ನೆನಪು
ಹಾಸಿಗೆ ಚೆಲ್ಲಾಪಿಲ್ಲಿಯಾಗಿಸುವುದು ಬಿಡಿ ಕನಸುಗಳಂತೆ
ಅನುಕ್ಷಣವೂ ತಲೆದಿಂಬು ತೋಯಿಸದು ನಿನ್ನ ನೆನಪು
ಹಗಲಾದರೆ ಇರುಳಂತೆ ಕತ್ತಲೆ ತರಿಸುವುದು ಕಂಗಳಿಗೆ
ಸರಾಗ ಬದುಕ ಬಂಡಿಯನು ಸಾಗಿಸದು ನಿನ್ನ ನೆನಪು
ಅದೆಷ್ಟು ಮುರುಟಿದ್ದಾನೆ ನೋಡು ಮರಮರಗಿ ಅಮೀರ್
ಹೆಚ್ಚುತ್ತಿದೆ ದುಃಖಗಳ ಹರಿವು ಶಮನಗೊಳಿಸದು ನಿನ್ನ ನೆನಪು
ಡಾ.ಅಮೀರುದ್ದೀನ್ ಖಾಜಿ
ಧನ್ಯವಾದಗಳು ಸರ್
ಮನ ಮುಟ್ಟುವ ನಿಮ್ಮ ಈ ಗಜಲ’
Mashallah uncle
SubhanAllah