ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಗಜಲ್
ಹಾಡುವ ರಾಗಕ್ಕೆ ನಲ್ಮೆಯ ಪದವ ಸೇರಿಸು ಬಾರೆ
ಮೂಡಿದ ಕನಸಲಿ ಪ್ರೀತಿಯ ಪಲ್ಲಕ್ಕಿ ಇರಿಸು ಬಾರೆ
ಹೃದ್ಯದ ಮೇಘಗಳ ಕೂಡಿಸಿ ಇಡಲು ಸಾಧ್ಯವೆ ಹೇಳು
ಎದೆಯ ದೇಗುಲದಿ ಬಾಳಿನ ಹಣತೆ ಉರಿಸು ಬಾರೆ
ಮಂದಾರ ಪುಷ್ಪದಂತೆ ಸೌರಭ ಬೀರಿ ಸೆಳೆವೆ ಏಕೆ
ಬಂಧವ ಬೆಸೆದು ಮನದಿ ನವಭಾವ ಸ್ಪುರಿಸು ಬಾರೆ
ಹೃದಯದ ವೀಣೆ ನಾದವ ಹರಿಸುತ್ತಿದೆ ಓಡಿಬಾ ಸಖಿ
ನೈದಿಲೆ ಕಂಗಳಲಿ ಮೋಹಕ ನೋಟವ ತರಿಸು ಬಾರೆ
ತಂಟೆ ತಕರಾರು ಮಾಡದೆ ಕರೆದೀತು ಅಭಿನವ ಕಾವ್ಯ
ಒಂಟಿ ಜೀವಕೆ ಜೊತೆಯಾಗಿ ವಿರಹವ ಸರಿಸು ಬಾರೆ
ಶಂಕರಾನಂದ ಹೆಬ್ಬಾಳ