ಕಾವ್ಯ ಸಂಗಾತಿ
ಶ್ರೀನಿವಾಸ ಜಾಲವಾದಿ
‘ಜೀವ ಜಲ’
ಬಲ ಭೀಮನ ಅಭಿಮಾನಕೆ
ನಾ ಮಣಿದೆ ಶರಣಾದೆ
ರಾಮ ರಾಮನ ಸ್ಮರಣೆ
ನನಗಾಯಿತು ಜಗಜೀವನರಾಮನ ಕರುಣೆ!
ಹಸಿರು ಕ್ರಾಂತಿಯ ಹರಿಕಾರನ
ನಾಮ ಸ್ಮರಣೆಯೇ ಪಾವನ
ಕಾಯಕದೀ ಕೈಲಾಸ ಕಂಡ
ರಾಮನ ಅವತಾರವೇ ಪ್ರಚಂಡ!
ಕಾಮಧೇನು ಕಲ್ಪವೃಕ್ಷ
ಜಗದ ಪ್ರೀತಿಯ ಪುತ್ರ
ದಲಿತ ಸೂರ್ಯನ ಜೋಡಿ
ನೀ ಪ್ರೀತಿ ಸಿಂಚನದ ಮೋಡಿ!
ಭಾರತ ಭಾಗ್ಯ ವಿಧಾತನ
ಪ್ರೀತಿ ಪಾತ್ರನು ರಾಮನು
ಜೀವ ಸಂಕುಲ ಮರೆಯಿತು
ನಿನ್ನ ಆತ್ಮಾಭಿಮಾನದ ಜ್ಯೋತಿಯಾಗಿ!
ಸಿಡಿಲಬ್ಬರದ ಜಾಗೃತ ಜನ
ಬಂದರೋ ಬಂದರು ಸಾಗರೋಪಾದಿ
ಮಾನವ ಕುಲದ ಸರದಾರ
ರಾಮ ನೀನು ಜಗದ ಜೀವ ಜಲ
ಜಗಜೀವನವೇ ರಾಮ ಸುಧೆ!
ಶ್ರೀನಿವಾಸ ಜಾಲವಾದಿ
ಸಾಲುಗಳು…