ವಿದ್ಯಾರ್ಥಿ ವಿಭಾಗ-ಆರಾಧ್ಯ ಎ ರಾವ್

ಮಕ್ಕಳಕಥೆ

ಆರಾಧ್ಯ ಎ ರಾವ್

ನೀತಿಕಥೆ

ಜೋಡಿ ನಾಯಿಗಳು

ಜೋಡಿ ನಾಯಿಗಳು

ಒಂದು ಊರಿನ ಹೆಸರು ತೋಕೂರು. ಅಲ್ಲಿ ತುಂಬಾ ನಾಯಿಗಳು ಇದ್ದವು. ಅವುಗಳಲ್ಲಿ ಎರಡು ನಾಯಿಗಳು, ಒಂದು ಗಂಡು ಒಂದು ಹೆಣ್ಣು ಜೋಡಿಯಾಗಿ ಇದ್ದವು. ಒಂದನ್ನೊಂದು ತುಂಬಾ ಪ್ರೀತಿಸುತ್ತಿದ್ದವು. ಒಂದು ದಿನ ಬೇರೆ ನಾಯಿ ಎಂದು ಬಂದು ಹೆಣ್ಣು ನಾಯಿ ಜೊತೆಗೆ ಜಗಳ ಮಾಡಿತು. ಅದಕ್ಕೆ ಗಂಡು ನಾಯಿ ಕೋಪ ಬಂದು ಆ ಬೇರೆ ನಾಯಿಗೆ ಬಾರಿಸಿತು. ಆ ನಾಯಿ ಭಯದಿಂದ ಓಡಿ ಹೋಯಿತು. ಎಲ್ಲಿ ಹೋದರು ನಾಯಿಗಳು ಜೊತೆಯಾಗಿಯೇ ಇರುತ್ತಿದ್ದವು. ಇಡೀ ಊರು ಈ ನಾಯಿಗಳ ಜೋಡಿ ನೋಡಿ ಅಚ್ಚರಿಪಟ್ಟಿತ್ತು. ಆದರೆ ಒಂದು ದಿವಸ ಒಬ್ಬ ಮನುಷ್ಯ, ತನ್ನ ಮನೆಯ ನಾಯಿಯ ರಕ್ಷಣೆಗಾಗಿ , ಈ ನಾಯಿಗಳಿಗೆ ಊಟದಲ್ಲಿ ವಿಷ ಹಾಕಿ ಸಾಯಿಸಿದ. ಇವುಗಳ ಸಾವಿನ ಸುದ್ದಿ ಕೇಳಿ ಇಡೀ ಊರು ಕಣ್ಣೀರಿಟ್ಟಿತು. ಆ ಮನುಷ್ಯನಿಗೆ ಹಿಡಿ ಶಾಪ ಹಾಕಿತು.

ನೀತಿ: ಮನುಷ್ಯತ್ವ ಮರೆಯಬಾರದು


ಆರಾಧ್ಯ ಎ ರಾವ್
5ನೇ ತರಗತಿ
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ ಮೂಲ್ಕಿ

Leave a Reply

Back To Top