ಉತ್ತಮ ಎ.ದೊಡ್ಮನಿ ಕವಿತೆ-ಹೌದಲ್ವಾ ?

ಕಾವ್ಯ ಸಂಗಾತಿ

ಉತ್ತಮ ಎ.ದೊಡ್ಮನಿ

ಹೌದಲ್ವಾ ?

ಹೌದು! ಹೃದಯ ಬಡಿದಿಕೊಳ್ಳುತೆ
ಜೋರಾ…ಗಿ ನನ್ನದೆಯೋ? ಇಲ್ಲಾ! ಅನ್ನುವಷ್ಟು
ಸಮುದ್ರವು ಕಡಲಿಗೆ ಅಪ್ಪಳಿಸಿದಂತೆ
ಯಾರೋ ಬಂದು, ಎದೆಗೆ ಗುದ್ದಿದಂತೆ

ಹಾಗೇನೇ ಅದು, ಅದರ ನೋವು
ಎದೆಗೆ ಸೂಜಿ ಚುಚ್ಚಿದಂತೆ ಹಿತಕರ
ಮುಂಜಾವಿನ ತಂಗಾಳಿ ಮುಖಕೆ ಮುತ್ತಿಟ್ಟಂತೆ

ಹಗಲಂತ್ತೂ ಬಿಡೂ, ಕಣ್ಣಿಗೆ ಕತ್ತಲಿಲ್ಲ
ರಾತ್ರಿಯಲ್ಲಿ ಒಮ್ಮಿಂದೋಮೇಲೆ ಎದ್ದೂ
ಅಕ್ಕ-ಪಕ್ಕ ಕೈ ಆಡಿಸಿತಾ ಹುಡುಕುತ್ತೇನೆ

ನೆನಪುಗಳೇ ಹಾಗೆ ಅಲ್ವಾ!
ನೋವೋ-ಖುಷಿನೋ, ತಿಳಿಯದ ಒದ್ದಾಟ
ಅಷ್ಟೊಂದು ಬಂಧನ, ಬಿಡಿಸಲಾಗದಷ್ಟು

ಎಲ್ಲೋ-ಏನೋ, ಸಮಯ-ಸಂದರ್ಭ
ತಟ್ಟನೇ ಕಣ್ಮಂದೆ, ಮನಕೆ ಸಿಡಿಲು
ಬಡಿದಂತೆ ಬಂದು, ಎಚ್ಚರಿಕೆ ಕೊಟ್ಟಂತೆ

ಹೊತ್ತಿಲದ ಹೊತ್ತಿನಲ್ಲಿ ನುಗ್ಗುವುದು
ಹೊಲದ ಬೇಲಿ ದಾಟಿ ಬಂದ ದನಗಳಂತೆ
ಮನವ ಕದಡಲು

ಹೌದಲ್ವಾ !
ಆಗಾಗ ಬಂದು ಹೋಗಲು ನೆಂಟರ!
ಸದಾ ನೆರಳಿನಂತೆ ಹಿಂಬಾಲಿಸುವ
ಹಿಂಬಾಲಕ, ಜೊತೆಗಾರ


ಉತ್ತಮ ಎ.ದೊಡ್ಮನಿ

One thought on “ಉತ್ತಮ ಎ.ದೊಡ್ಮನಿ ಕವಿತೆ-ಹೌದಲ್ವಾ ?

  1. ನೆನಪುಗಳು ಹಾಗೆ ಮರೀಚಿಕೆ ತರ
    ಕಂಡು ಕಣ್ಮರೆ ಆಗುವ ಮಾಯೆ ಜಿಂಕೆ

Leave a Reply

Back To Top