ಕಾವ್ಯಸಂಗಾತಿ
ಸುಧಾ ಪಾಟೀಲ
ಹೃದಯದ ಮಾತು
ಹೃದಯದ ಭಾಷೆ
ಬರೆದು ಹತ್ತಿರ
ನೀ ಬಂದಾಗ
ಅನುರಾಗದಿಂದ
ಒಪ್ಪಿಕೊಂಡಾಗ
ನಗೆಮಲ್ಲಿಗೆಯ
ನಾ ಬೀರಿ
ಮೆಚ್ಚಿದೆ ನಿನ್ನ
ಒಳಹರಿವಿನ
ಇಂಗಿತವ
ಮಧುರ
ಇಬ್ಬನಿ ಬೆರೆತ
ನುಡಿಗಳ
ಮುತ್ತಿನಂಥ
ಸ್ತುತ್ಯಾರ್ಥವಿಲ್ಲದ
ಕವನದ
ಸಾಲುಗಳ
ಯಾವುದೇ
ಅಪೇಕ್ಷೆಯಿಲ್ಲದ
ಸಾಂಗತ್ಯವ
ಮಾಡುವ
ಕಾರ್ಯವೇ
ಜೀವಾಳವಾಗಿ
ಅರಿವೇ ಗುರು
ಎಂದು
ಬಸವನಲ್ಲಿ
ಲೀನವಾದಾಗ
ಸಾರ್ಥಕತೆಯ
ಭಾವ ಉಕ್ಕಿ
ಜೀವನದ
ಉದ್ದೇಶವೇ
ಬದಲಾದಾಗ
ಕ್ರಿಯಾತ್ಮಕತೆಯ
ಹೊಳವಿನಲ್ಲಿ
ಒಬ್ಬರಿಗೊಬ್ಬರು
ಇನ್ನಷ್ಟು
ಅರಿತಾಗ
ಬಿಡಿಸಲಾರದ
ಕೊಂಡಿ
ತನ್ನಿಂದ ತಾನೇ
ಅರಳಿ ನಿಂತಿತು.
ಸುಧಾ ಪಾಟೀಲ
ಸುಂದರ ಸರಳ ರೀತಿಯಲ್ಲಿ ಅರಳಿ ಬಂದ ಕವನ ಸಿಂಚನ
Wow very beautiful ❤️ poem
ಇಂತಹ ಅದ್ಭುತ ಕಲ್ಪನೆ ಕವನ ಕಾವ್ಯ ರೂಪದಲ್ಲಿ ಅರಳಿ ನಿಂತಿದೆ
Wow very beautiful narration
ಸುಂದರ ಭಾವದ ಹಾಡು
ಸುಧಾ ಪಾಟೀಲ ನಿಮ್ಮ ಕಾವ್ಯ ಪ್ರೌಢಿಮೆ ಗೆ ಒಂದು ಸಲಾಂ
Excellent poetry
Very simple and beautiful poem
ನನ್ನ ಕವನ ಮೆಚ್ಚಿದ ಎಲ್ಲ ಕವಿಮನಸುಗಳಿಗೆ ಧನ್ಯವಾದಗಳು