ಕಾವ್ಯಸಂಗಾತಿ
ಎಸ್.ಜಿ. ಟಿ. ಸ್ವಾಮಿ ಕೈಗಾ
ಆಸರೆ
ಉರಿವ ಸೂರ್ಯ ನಂತಿದ್ದೆ ನಾನು..
ತಂಪಾಗಿಸಿದೆ ಪೂರ್ಣಿಮೆಯ ಚಂದ್ರನಾಗಿ ನೀನು..
ಬಾಳ ಬಂಡಿಯಲಿ ತ್ಯಾಗವನೀಯುತೆ..
ಕೃಶವಾದೆ ನೀ ಅಮಾವಾಸ್ಯೆ ಸನಿಹ ಚಂದಿರನಂತೆ..
ಮಕ್ಕಳೆಂಬ ನಕ್ಷತ್ರಗಳು ದೂರ ಸಾಗಿವೆಯಿಂದು..
ತಮ್ಮದೇ ಲೋಕವ ಸೃಜಿಸಿಕೊಂಡು ..
ಅಸ್ತಮಾನದ ರವಿಯಂತೆ ನಾನಾಗಿ..
ಆಸರೆಯಾಗಿರುವೆ ನೀನು ಮತ್ತೆ ಹುಣ್ಣಿಮೆಯ ಶಶಿಯಾಗಿ..
ಎಸ್.ಜಿ. ಟಿ. ಸ್ವಾಮಿ ಕೈಗಾ.
Very nice cuplet. Good going keep it up.willing to read more.. congrats.
ಸುಂದರ ಸಾಲುಗಳು ಸರ್
Very nice lines
Beautiful, Thippeswamy!
Very very Beautiful SJT