ಮನ್ಸೂರ್ ಮುಲ್ಕಿ ಕವಿತೆ ನನ್ನೊಲವು

ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿ

ನನ್ನೊಲವು

ಒಲವಲ್ಲಿ ಬಂದು ಮನದಲ್ಲೇ ಸೆಳೆದು
ಹೂವಂತ ಮಾತನ್ನೇ ಆಡಿದೆ
ಎಲ್ಲೆಲ್ಲೂ ನಿನ್ನ ನೆನಪನ್ನೇ ತರಿಸಿ
ನೂರೊಂದು ಗೀತೆಯ ಹಾಡಿದೆ.

ನಿನ್ನೆಲ್ಲ ಮಾತು ನನಗದುವೇ ಸೊತ್ತು
ನೀ ನನ್ನ ಸ್ವಂತದ ಮುತ್ತು
ಈ ಪ್ರೀತಿ ನಿಂದೆ ಹಾಗಂತ ಅಂದೆ
ನಿನ್ನ ಮಾತಲ್ಲೇ ಸೊಬಗನ್ನು ಕಂಡೆ.

ನಗುವನ್ನು ಬೀರಿ ನಾಚಿಕೆ ಪಟ್ಟು
ನಡೆದ ಆ ಕಾಲ ಚಂದವು ಅಂದು
ಸೀರೆಯ ಉಟ್ಟು ಹೆಜ್ಜೆಯ ಇಟ್ಟು
ನಡೆದ ಈ ಕಾಲ ಚಂದವು ಇಂದು.

ಅರಳಿದ ಹೂವು ಸುವಾಸನೆ ನೀಡಿ
ಬಾಳೆಲ್ಲ ಸುಗಂಧವಾಗಿದೆ
ಜನುಮದ ಜೋಡಿ ನಾವೆಂದು ಹೇಳಿ
ಹಕ್ಕಿಯ ಹಾಡೆಲ್ಲ ಕೊಂಡಾಟವಾಗಿದೆ.

ಮೂಡುವ ಕನಸಲ್ಲಿ ಮೋಡದ ಮರೆಯಲ್ಲಿ
ಹಾಯಾಗಿ ನಾವು ತೇಲಾಡುವ
ಚಂದಿರನ ಬೆಳಕಲ್ಲಿ ಚುಕ್ಕಿಗಳ ಕಂಡು
ಪ್ರಕೃತಿಯ ಮಡಿಲಲ್ಲಿ ಕುಣಿದಾಡುವ.


ಮನ್ಸೂರ್ ಮುಲ್ಕಿ

Leave a Reply

Back To Top