ಜನುಮ ದಿನದ ಆಚರಣೆ ಜಾತ್ರೆಯಾಗದಿರಲಿ…ಸುರೇಶ ತಂಗೋಡ

ಕಾವ್ಯ ಸಂಗಾತಿ

ಜನುಮ ದಿನದ ಆಚರಣೆ

ಜಾತ್ರೆಯಾಗದಿರಲಿ…

ಸುರೇಶ ತಂಗೋಡ

 “ನೂರಾರು ಕಾಲ ಸುಖವಾಗಿ ಬಾಳು ಹ್ಯಾಪಿ ..ಹ್ಯಾಪಿ ಬರ್ತ್ ಡೇ,ನಿನ್ನ ಬಾಳು ಎಂದು ಬೆಳಕಾಗಬೇಕು ಹ್ಯಾಪಿ ,ಹ್ಯಾಪಿ ಬರ್ತ್ ಡೇ” ಹಾಡನ್ನು ಭಾವಚಿತ್ರದೊಂದಿಗೆ ಅಂಟಿಸಿ ಸ್ಟೇಟಟ್ಸ್ ಹಾಕಿ,ಕೇಕ್ ತಂದು ಅರ್ಧ ಮೈ-ಕೈಗೆ ಅಂಟಿಸಿಕೊಂಡು ಉಳಿದ ಸ್ವಲ್ಪವನ್ನು ತಿಂದು ಈ ನೆಪವಿಟ್ಟುಕೊಂಡು ಕುಡಿದು,ಕುಪ್ಪಳಿಸುವ ಹುಚ್ವುತನದ ಹೊಸಬರ ದಂಡೆ ಇದೆ ಇಲ್ಲಿ.ಜನುಮ ದಿನವನ್ನು ಜಾತ್ರೆ ಮಾಡುವವರೂ ಇದ್ದಾರೆ.ಪೋಟೊ -ಪ್ಲೇಕ್ಸಗಳು ಹಾರ -ತುರಾಯಿಗಳ ಸಡಗರ ಬೇರೆ.ಇನ್ನು ಮುಂದೆ ಹೋಗಿ ಬರ್ತ್ ಡೇ ಗಾಗಿ ಆಸ್ಪತ್ರೆಗೆ ಹೋಗಿ ಹಣ್ಣು -ಹಂಪಲು ಹಿಡಿದು ಪೋಟೊಗೆ ಪೋಸ್ ಕೊಡುವ ವೀರರು ಬಹಳ ಮಂದಿ.ಈ ರೀತಿಯ ಹುಟ್ಟು ಹಬ್ಬದ ಆಚರಣೆಗೆ ಅರ್ಥವಿಲ್ಲ.ಅದ್ಯಾಗೂ ಇನ್ನು ಒಂದು ವಿಷಯವಿದೆ,ಅದೆನೆಂದರೆ ಪಕ್ಕದ ಮನೆಯ ಮುರುಗೇಶ ಗ್ರಾಂಡ್ ಆಗಿ ಮೊನ್ನೆ ಹುಟ್ಟು ಹಬ್ಬ  ಆಚರಿಸಿ ಕೊಂಡನೆಂದು ತಾನು ಆಚರಿಸಿಕೊಳ್ಳುವ ಆಧುನಿಕ ಜನರ ಖಯಾಲಿ ಕಂಡಾಗಗಲೆಲ್ಲ ನನಗಂತೂ ಗೊಳ್ಳೆಂಬ ನಗು.
                                         ಪ್ರತಿಯೊಬ್ಬರ ಜೀವನದಲ್ಲೂ ಜನುಮ ದಿನವೊಂಬುದು ವಿಶೇಷತೆಯ ಹೂರಣವಿದ್ದಂತೆ.ಆದರೆ ಅದನ್ನು ಮಿತವಾಗಿ, ಹಿತವಾಗಿ ತಿಂದರಷ್ಟೇ ಅದು ಸ್ವಾದವಾಗುವುದು ಮತ್ತು ಆರೋಗ್ಯಕ್ಕೂ ಒಳ್ಳೆಯದು.ಆ ನಿಟ್ಟಿನಲ್ಲಿ ಹುಟ್ಟುವನ್ನು ಇನ್ನು ಭಿನ್ನವಾಗಿ ,ಸ್ವಾಸ್ಥ್ಯವಾಗಿ,ಆರೋಗ್ಯಕರ ಹವ್ಯಾಸಗಳಿಂದ ಮತ್ತು ಚಟುವಟಿಕೆಗಳಿಂದ ಆಚರಿಸಿಕೊಳ್ಳಬಹುದು .ಅಂತಹ ಉಪಾಯಗಳು ಇಲ್ಲಿ ಪಟ್ಟಿಮಾಡಲಾಗಿಫ಼ೆ ಓದಿಕೊಳ್ಳಿ
 ಸಂಪ್ರದಾಯಕ ಆಚರಣೆ: ಹುಟ್ಟು ಹಬ್ಬದ ದಿನದಂದು ನಸುಕಿನಲ್ಲಿ‌ ಎದ್ದು ಸ್ನಾನ ಮುಗಿಸಿ ಹೊಸ ಉಡುಪುಗಳ ಧರಿಸಿ ,ದೇವಾಲಯಕ್ಕೆ ಹೋಗಿ ಅರ್ಚನೇಆಡಿಸಿ ,ಮನೆಯ ಗುರು-ಹಿರಿಯರಿಂದ ಆಶೀರ್ವಾದ ಪಡೆಯಬೇಕು.ನಂತರ ಮನ್ವ್ಯಲ್ಲಿ‌ ಸಿಹಿ ತಿಂದು ಮನೆಯವರ ಜೊತೆ ಬೆರೆತು ಖುಷಿ-ಖುಷಿಯಾಗಿ  ಲವಲವಿಕೆಯಿಂದ ಕೂಡಿದ ಚಟುವಟಿಕೆಗಳನ್ನು ಮಾಡುತ್ತಾ  ಈ ಜನುಮ ದಿನವನ್ನು ಕಳೆಯಬೇಕು.
 ಗಿಡವ ನೆಡುವುದರ ಮೂಲಕ ಆಚರಣೆ: ಕಾಡು ಇದ್ದರೆ  ನಾಡು ಎನ್ನುವ ಮಾತನ್ನು ಬರೀ ಪ್ರಬಂಧ ,ಭಾಷಣಗಳಿಗೆ ಸೀಮಿತಗೊಳಿಸದೇ ಪ್ರತಿಯೊಬ್ಬರು ತಮ್ಮ ಹುಟ್ಟು ಹಬ್ಬದಂದು ಸಸಿಗಳನ್ನು ನೆಟ್ಟು ಅವುಗಳನ್ನು ನಿರಂತರವಾಗಿ ಪೋಷಿಸುತ್ತಾ ಬಂದರೆ ಸಮಾಜಕ್ಕೆ ನಿಮ್ಮ ಅಳಿಲು ಸೇವೆ ನೀಡಿದಂತೆ ಹಾಗೂ ನಿಮ್ಮ ಜನ್ಮದಿನಕ್ಕೆ ಶೋಭೆ ತಂದಂತೆ.ಹೀಗೆ ಮಾಡುವುದರ ಮೂಲಕ ಹಸಿರನ್ನು ಉಳಿಸಿದಂತಾಗುತ್ತದೆ‌.
 ಅವಶ್ಯಕತೆಯುಳ್ಳವರಿಗೆ ಸಹಾಯ ಮಾಡಿ: ”ಅವಶ್ಯಕತೆಗಳೇ ಅನ್ವೇಷಣೆಯ ತಾಯಿ” ಎಂಬ ಮಾತಿನಂತೆ ಕೆಲವರಿಗೆ ಆಹಾರದ ಅವಶ್ಯಕತೆ,ಕೆಲವರಿಗೆ ಬಟ್ಟೆಯ ಅವಶ್ಯಕತೆ ಹಾಗೇ ಇನ್ನು ಬೇರೆ ಬೇರೆಯ ಅವಶ್ಯಕತೆ ಇರುತ್ತದೆ.ಹುಟ್ಟು ಹಬ್ಬದಂದು ಕೆಲವರಿಗಾದರೂ ಅವರ ಅವಶ್ಯಕತೆಗೆ ತಕ್ಕೂದಾದ ಸಹಾಯ ಮಾಡೋಣ .ಆ ಮೂಲಕ ಆತ್ಮತೃಪ್ತಿಯ ಬಾಳು ಬಾಳೋಣ.
 ಮಕ್ಕಳೊಂದಿಗೆ ಬೆರೆಯಿರಿ: ”ಪರಿಶುದ್ಧ ಆತ್ಮಗಳೆಂದರೆ ಅವು ಮಕ್ಕಳು” ಅಕ್ಷರಶ ಸತ್ಯವಾದ ಮಾತು.ಸಾದ್ಯವಾದಷ್ಟು ಮಕ್ಕಳೊಂದಿಗೆ ಬೆರೆಯಿರಿ.ಒತ್ತಡದ ನಮ್ಮ ಜೀವನ ಶೈಲಿಯಲ್ಲಿ ಮಕ್ಕಳೊಂದಿಗೆ ಆಟವಾಡುವ ,ಮಾತಾಡುವ ,ಅವರ ತುಂಟಾಟಗಳನ್ನು ಕಣ್ಣುತುಂಬಿಕೊಳ್ಳುವ ಗೋಜಿಗೆ ನಾವು ಹೋಗಿರುವುದಿಲ್ಲ.ಆದರೆ ಹುಟ್ಟು ಹಬ್ಬದಂದು ಹೆಚ್ಚು ಮಕ್ಕಳೊಂದಿಗೆ ಕಳೆಯಿರಿ ನಿಮ್ಮ ಮನಸ್ಸು ಹಗುರವಾಗುತ್ತದೆ ಮತ್ತು ನವಚೈತನ್ಯ ಮೂಡುತ್ತದೆ.
 ಜೀವನದ ಯೋಜನೆ ಸಿದ್ದಪಡಿಸಿಕೊಳ್ಳಿ: ಪ್ರತಿಯೊಬ್ಬರು ಮಾಡಲೇಬೇಕಾದ ಅತಿ ಅವಶ್ಯಕ ಕೆಲಸವಿದು.ನೀವು ಭೂಮಿಗೆ ಬಂದಿರುವ ಕುರುಹಿಗಾಗಿ ಮಹತ್ತರವಾದದ್ದು ಅಲ್ಲದಾದರೂ ಚೊಕ್ಕದಾದ ಕೆಲಸಗಳನ್ನು ಮಾಡಬೇಕು ಅದಕ್ಕೆ ಯೋಜನೆ ಅತಿ ಮುಖ್ಯ.ಈ ದಿನವನ್ನು ಅಂತಹ ಯೋಜನೆ ಮಾಡಲು ಮೀಸಲಿಡಿ.ಧನಾತ್ಮಕವಾಗಿ ಚಿಂತಿಸುವ ಹಾಗೂ ಪದೋನ್ನತಿ ಹೊಂದುವ  ಹೀಗೆ ಬೇರೆ ಬೇರೆ ನಿರ್ಧಾರಗಳನ್ನು_ಪ್ರತಿಜ್ಞೆಗಳನ್ನು ,ಗುರಿಗಳನ್ನು ಇಟ್ಟುಕೊಂಡು ಈ ದಿನವನ್ನು ಗುರುತರವಾಗಿರುವಂತೆ ಮಾಡಿ.
                                    ಇವಿಷ್ಟೇ ಅಲ್ಲದೇ ಇನ್ನು ಬೇರೆ ಬೇರೆಯಾಗಿ ಆರೋಗ್ಯಕರವಾಗಿ ಮತ್ತು ಹವ್ಯಾಸಭರಿತವಾಗಿ ಜನುಮ ದಿನವನ್ನು ಆಚರಿಸಿಕೊಳ್ಳಬಹುದು.ಅಂತಹ ಐಡಿಯಾಗಳನ್ನು ಹುಡುಕಿ ಆಚರಣೆಗೆ ತರುವ ಕ್ರಿಯಾಶೀಲ ಮನಸ್ಸು ಬೇಕಷ್ಟೇ.ಹಾಗಾದರೇ ಅವರು-ಇವರು ವಿಶ್ ಮಾಡಿದ ಪೋಟೊಗಳನ್ನು ಸ್ಕ್ರೀನ್ ಸಾಟ್ ತೆಗೆದು ನಮ್ಮ ಸ್ಟೇಟಸನ್ನೂ ಹನುಮನ ಬಾಲ ಮಾಡುವ ಬದಲು ಸ್ವಲ್ಪ ಮನಸ್ಸು ಬದಲಾಯಿಸಿ ಮೇಲಿನ ಆಚರಣೆಗಳನ್ನು ಅನುಷ್ಠಾನಗೊಳಿಸೋಣ ಬನ್ನಿ…..


 ಸುರೇಶ ತಂಗೋಡ 

Leave a Reply

Back To Top