ಕಾವ್ಯ ಸಂಗಾತಿ
ನಿಶ್ಚಿತ.ಎಸ್
ಭಾವನೆಯತ್ತ ಪಯಣ
ಕನಸು ನೂರಿದ್ದರೂ..
ಆಸೆ ಈಡೇರದಿದ್ದರೂ..
ನೋವುಗಳ ಅನುಭವಿಸಿದರೂ..
ಭಾವನೆಗಳು ಬದಲಾದರು…
ಎಂದೆಂದಿಗೂ ಈ ಬದುಕು ನಿರಂತರ….
ಅನಿಸಿದ್ದನ್ನು ಹೇಳುವ
ಭಾವನೆಗಳಿಗೆ …
ಅಡ್ಡವಾಗುವ ಪ್ರೀತಿಯ ಸಂಬಂಧಗಳು..
ಹೇಳದಂತೆ ಮನದಲ್ಲಿ ಬಚ್ಚಿಟ್ಟುಕೊಂಡು….
ಒದ್ದಾಡುವುದೇ ಈ ಭಾವನೆಗಳ ಬದುಕು….
ಸುಂದರ ಪಯಣದೊಂದಿಗೆ… ಬಾಳುವುದೇ ನಗುವಿನ ಬದುಕು..
ಭಾವನೆಗಳು ಇದ್ದರೂ ನಟಿಸುತ್ತಾ ನಾಟಕದವರಂತೆ…
ಭಾವನೆಗಳು ಇಲ್ಲದಿದ್ದರೂ ನಟಿಸುತ್ತಾರೆ ನಮ್ಮವರಂತೆ….
ಇದೆ ಅಲ್ಲವಾ ಈ ಭಾವನೆಗಳ ಬದುಕು…
ಭಾವನೆಗಳಿಲ್ಲದ ಬದುಕು… ಬಾಂಧವ್ಯವಿಲ್ಲದ ಸಂಸಾರ… ಸುಖವಿಲ್ಲದ ಜೀವನ…
ಕನಸನ್ನು ಈಡೇರಿಸದ ಛಲ…
ಇವೆಲ್ಲವೂ ಹೆಸರಿದ್ದರು ಉಸಿರಿಲ್ಲದಂತೆ ಬದುಕುವುದು…
ಭಾವನೆಗಳು ಸವಿಯ ಭಾವನೆಯಲ್ಲಿ …
ಮಧುರವಾದ ಅಂಶಗಳುಳ್ಳಬೇಕು..
ಕಲ್ಲಂತೆ ಇರುವುದಲ್ಲ ಜೀವನ..
ಭಾವನೆಗಳನ್ನು ಬೆಸೆದು ಬಾಂಧವ್ಯವನ್ನು ಹೊಂದಿ..
ಬದುಕುವುದೇ ಜೀವನ…
ಅದೇ ಸುಂದರಮಯ ಜೀವನ.. ಅದರಲ್ಲಿ ನಗುತ ಸಾಗಬೇಕು ಈ ಮಾನವ…
ಭಾವನೆಗಳಿದ್ದರೆ ಜೀವನ..
ಉತ್ತಮ ಭಾವನೆಗಳೊಂದಿಗೆ ಉತ್ತಮ ಜೀವನ.
ಆ ಭಾವನೆ ಮೊದಲು ನಮ್ಮಲ್ಲಿದ್ದರೆ..
ನೋಡುಗರಲ್ಲಿ ತಾನಾಗೆ ಬರುವುದು..
ಆಗ ಭವನಾತ್ಮಕವಾದ ಬದುಕು ಭವಿಷ್ಯದಲ್ಲಿ ಉನ್ನತವಾಗಿ ನಾವಿರುವುವಂತೆ ಮಾಡುತ್ತದೆ..
ಬರೆದಿರುವವರು ನಿಶ್ಚಿತ.ಎಸ್ (S.N)