ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಒಡೆದ ಹೃದಯ

ದೇವಿದಾಸ ನಾಯಕ ಅಗಸೂರು

ಹೃದಯದ ಬಡಿತ ಹೇಳಲೆ ನಾನು
ಕೇಳುವ ತಾಳ್ಮೆ ನಿನಗಿದೆಯೇನು?
ಆ ನಿನ್ನ ನೋಟ,ಆನಿನ್ನ ನಗೆಗೆ
ಮನಸೋತೆ ನಾನಿಂದು ನಿನಗೆ/ಪ/

ನಡುಗಲು ದೇಹ ತೊದಲುವ ನುಡಿಯು
ಮೂಕನಾಗಿ ಮಾಡಿ ಸುಮ್ಮನಾಯಿತು.
ದಿನಗಳು ಉರುಳಿ ಕನಸು ಕಾಣಲು
ನಾಳೆ ಹೇಳೆಂದು ಮನಸು ಹೇಳಿತು(೧)

ಕತ್ತಲು ಜಾರಿ ಹಗಲಾಗುತಿರಲು
ನಿನಗೊಸ್ಕರ ಎದ್ದು ಬಿದ್ದು ಎದ್ದೆ ನಾ
ಚೆಲುವೆ ನೀ ಬರಲು ನಾ ಓಡಿ ಬಂದೆ
ನಿನ್ನ ನೋಡಿ ಹೆದರಿ ನಿಂತೆ ನಾ(೨)

ನರಳಿತು,ಅಂಜಿತು ಈ ಜೀವ
ನನ್ನದೆಯ ಭಾವನೆ ಹೇಳದೆ ನಾನು
ಒಲವಿನ ನನ್ನರಸಿ ನಾಳೆ ಸಿಗುವೆಯಾ?
ನನ್ನಾಸೆ ಅರಳಲು ಬರುವೆಯಾ ನೀನು..(೩)

ಸನಿಹ ಬರುವ ನಿನ್ನ ನಾ ನೋಡಲು
ಎದೆ ಒಡೆದು ಚೂರು ಚೂರಾಯಿತು
ನಾಳೆ ಎಂದವನಿಗೆ ಇದೆ ಗತಿ
ಬಯಸಿದವಳಿಂದು ಯಾರದೊ ಸೊತ್ತು..(೪)


ದೇವಿದಾಸ ನಾಯಕ ಅಗಸೂರು

About The Author

1 thought on “ಒಡೆದ ಹೃದಯ- ದೇವಿದಾಸ ನಾಯಕ ಅಗಸೂರು”

  1. shivaleela hunasagi

    ಭಗ್ನ ಪ್ರೇಮಿಯ ದುರಂತ ಕಥನ ಮನನೊಂದು ಒದ್ದಾಡಿದ ಪ್ರತಿಗಳಿಗೆಗೆ ಹಿಡಿದಿಟ್ಟ ಕನ್ನಡಿ.ಒಡೆದು ಚೂರಾದ ಹೃದಯ ಬಿಕ್ಕಳಿಸಿ ಅಳುವ ಸಮಯ ನಿಜಕ್ಕೂ ದುರಂತ.ಪ್ರೀತಿನೆ ಹೀಗೆ ಕನಸು ಮನಸಲು ಆವರಿಸಿ ತತ್ತರಿಸುವ ಕ್ಷಣ ಯಾರಿಗೂ ಬೇಡ….ಅಧ್ಬುತ ಭಾವ ಸೃಷ್ಟಿ… ಅಭಿನಂದನೆಗಳು

Leave a Reply

You cannot copy content of this page

Scroll to Top