ಕಾವ್ಯ ಸಂಗಾತಿ
ಡಾ. ಅಮೀರುದ್ದೀನ್ ಖಾಜಿ
ಗಜ಼ಲ್
ಅಹಿಂಸೆಯ ಅಸ್ತ್ರ ಹಿಡಿದು
ಆದ ಕ್ರಾಂತಿಪುರುಷ
ನಾಲಿಗೆಗೆ ಬೀಗ ಜಡಿದು
ಆದ ಕ್ರಾಂತಿಪುರುಷ
ತೋರಿ ಮೌಲ್ಯದ ಮಾರ್ಗ,
ಸಾರಿ ನೈತಿಕತೆ
ಸತ್ಯದ ದಾರಿಯಲಿ ದುಡಿದು
ಆದ ಕ್ರಾಂತಿಪುರುಷ
ನ್ಯಾಯದ ಧ್ವಜವನೆತ್ತಿ
ಸಾಗಿಯೇ ಸಾಗಿದ
ಕಲ್ಲುಮುಳ್ಳಿನ ಹಾದಿ ತುಳಿದು
ಆದ ಕ್ರಾಂತಿಪುರುಷ
ದೇಶಕಾಗಿಯೇ ಮುಡುಪಿಟ್ಟ
ಸರ್ವಸ್ವವನೂ
ಸಂಯಮದ ಸತ್ವ ತಿಳಿದು
ಆದ ಕ್ರಾಂತಿಪುರುಷ
ಶಾಂತಿಯ ಸಂದೇಶ ಸಾರಿ ಬ್ರಿಟಿಷರಿಗೆ ಮುಳುವಾದ
ಮಿಥ್ಯ ಅಳಿಸಿ,ಸತ್ಯ ನುಡಿದು
ಆದ ಕ್ರಾಂತಿಪುರುಷ
ಆದರ್ಶವನೆ ಹೊದ್ದ
ಮುಗ್ಧ ಮಗುವಿನಂತೆ
ಮುಗುಳ್ನಗೆಯ ಹೂ ಮುಡಿದು
ಆದ ಕ್ರಾಂತಿಪುರುಷ
ಡಾ. ಅಮೀರುದ್ದೀನ್ ಖಾಜಿ
ಧನ್ಯತಾ ಭಾವದ ಕೃತಜ್ಞತೆಗಳು ✨️