ಎ.ಎಸ್.ಮಕಾನದಾರ ಹಾಯ್ಕುಗಳು

ಕಾವ್ಯ ಸಂಗಾತಿ

ಎ.ಎಸ್.ಮಕಾನದಾರ

ಹಾಯ್ಕುಗಳು

ತುಟಿಗೆ ತುಟಿ
ಸೋಕಲು, ಕಣ್ಣುಗಳು
ತಾನೇ ತೊಟ್ಟಿಲು
*
ಅವನೇ ಬೇಕು
ಬದಲಿಸಲು ಬದಿ
ಋತುಮಾನಂತೆ
*
ನನ್ನೊಳಗಿನ
ಭಾವದೇರಿಳಿತ, ನಾ
ಸಖಿಯ ಭಕ್ತ
*
ಮಂಗಳಾಂಗಿನಿ
ಬೆಳಗಿದಳು ಎತ್ತಿ
ಕಂಗಳಾರುತಿ
*
ಅನಾಥ ತಾಯಿ
ಹೆತ್ತಳು ವೈಫಲ್ಯವ
ತಂದೆಯ ಯಶ
*
ಹೋಳಿ ಏತಕೆ,
ದಹನವೇ ಆಗಲಿ
ಮನೋಕಾಮನೆ
*
ನರಕದಲಿ
ಹುಡುಕದಿರು ನಾಕ
ಬಂದದ್ದೆ ಸಾಕು
*
ತೈಲವೂ ಖಾಲಿ
ಏದುಸಿರು ಬಿಟ್ಟಿದೆ
ಹಣತೆ ಕೂಡಾ
*
ದೂರು ಕೊಟ್ಟವ
ಒಬ್ಬ, ಶಿಕ್ಷೆಗೆ ಗುರಿ
ಆದ ಇನ್ನೊಬ್ಬ
*

ಚಿರಾಯು ಆತ್ಮ
ನಶಿಸುವ ಶರೀರ
ಗೂಡಿನಲ್ಲಿದೆ

*
ಆದರೆ ಬುದ್ಧ
ಕತ್ತಲವ ಕಳೆದು
ಬರಿ ಬೆಳಕು
——————-

ಎ.ಎಸ್.ಮಕಾನದಾರ

Leave a Reply

Back To Top