ಕಾವ್ಯ ಸಂಗಾತಿ
ರೇಷ್ಮಾ ಕಂದಕೂರ
ಹೃದಯ ಕಮಲವಾಗಿಬಿಟ್ಟೆ
ನನ್ನೊಳಗಿನ ನಿನ್ನ ಹುಡುಕ ಹೊರಟೆ
ಸಣ್ಣ ಹುಸಿಮುನಿಸಿನಾಚೆ ತಗಾದೆ ತೆಗೆದೆ
ಕಣ್ಣ ಬಣ್ಣದಿ ಗೀಚ ಹೊರಟೆ
ತಣ್ಣ ನಗೆಯ ಹರಿಸಬಾರದೇ.
ಮನದ ಮೂಲೆಯಲಿ ಅವಿತು ಬಿಟ್ಟೆ
ಸರಳ ಸಜ್ಜನಿಕೆಗೆ ರೂಪವಾದೆ
ತೋರಿಕೆಯ ಮರೆತು ಹೋದೆ
ಸರಿದೂಗಿಸಲು ಕಾಲವ ಮರೆತೆ.
ವೇದನೆಗೆ ಜೊತೆಗಾರನಾಗಿಬಿಟ್ಟೆ
ರೋಧಿಸುವಾಗ ಸಂತೈಸುವ ಕರವಾಗಿ ಬಿಟ್ಟೆ
ಮುದ್ದಿಸಲು ನಾನಾದೆ ರಾಧೆ
ಶುದ್ಧೀಕರಿಸಲು ನೀ ಕೃಷ್ಣ ನಾಗಿಬಿಟ್ಟೆ.
ಒಳಿತನು ಮೆಲುಕು ಹಾಕಲು ಕಲಿಸಿಕೊಟ್ಟೆ
ಬಳಲಿ ಬೆಂಡಾದ ತನುವಿಗೆ ಚೇತಕನಾಗಿಬಿಟ್ಟೆ
ಕಾನನಕೂ ನಗುವುದಕೆ ವರವಾಗಿಬಿಟ್ಟೆ
ಆನು ತಾನುಗಳ ಮಧ್ಯದ ಗೆರೆ ಅಳಿಸಿ ಹಾಕಿಬಿಟ್ಟೆ.
ನೀನಲ್ಲದೇ ನನಗಾರು ನಿಷ್ಟೆ
ಕರ್ಮ ಫಲದ ಅರಿವು ಮೂಡಿಸಿ ಬಿಟ್ಟೆ
ನಿತ್ಯ ನೂತನ ಕಲರವಕೆ ಹೊಸ ವೇಶ ಕೊಟ್ಟೆ
ನೀ ಎನ್ನ ಹೃದಯ ಕಮಲ ವಾಗಿಬಿಟ್ಟೆ.
ರೇಷ್ಮಾ ಕಂದಕೂರ