ಕಾವ್ಯಸಂಗಾತಿ
ಇಮಾಮ್ ಮದ್ಗಾರ್ ಕವಿತೆ
ಪಕ್ವ ವಾಗಿಲ್ಲ
ಮೊದಲ ಮುತ್ತೇಕೋ
ಮತ್ತೆ ನೆನಪಾಗಿದೆ
ಪುಟ್ಟ ನಗೆಬೀರಿ
ದೊಡ್ಡ ಭರವಸೆ ನೀಡಿ
ಸದ್ದಿಲ್ಲದೇ ಸಂಧಿಸಿ ಸಂಗಮವಾದ ನೆನಪು
ಮತ್ತೆ ನೆನಪಾಗಿದೆ
ಲೆಕ್ಕ ವಿಡದಷ್ಟು ಸಾರೆ
ತೆರೆತೆರೆದು ನೋಡಿದೆ ನಿನ್ನ
ಒಲವಿ ನೊಲೆಗಳ
ಬದಲಾಗಿದ್ದುಪಾತ್ರ.
ಕಥೆಯಲ್ಲ ಎಂಬರಿವಾದಾಗ ಮೌನವಾಗಿತ್ತು
ಮನದಕೊಳ
ನೀಕೊಟ್ಟ ಕೆಂಗುಲಾಬಿಯ
ಪಕಳೆಗಳು ಬಾಡಿವೆ
ಅದರ ಕಂಪಲ್ಲ
ನಿನ್ನ ನವಿಲುಗರಿ
ಮರಿ ಹಾಕೀಯೇ ಇಲ್ಲ
ರಕುತದಿ ಬರೆದ
ಪ್ರೇಮಪತ್ರ ಕಳೆದುಹೋಗಿಲ್ಲ
ಪ್ರೀತಿಯ ನೆನಪು
ಸಾಯುವದೂ…ಇಲ್ಲ
ಮೊದಲ ಹುರುಪು
ಮೊದಲ ಕನಸು
ಮೊದಲ ಧೈರ್ಯ
ಮೊದಲ ನವಿರಿಲ್ಲ
ನೀನಿಲ್ಲದೆ ಬದುಕು
ಪಕ್ವ ವಾಗಿಲ್ಲ
ಪ್ರೀತಿಗೆ
ಕಣ್ಣೀಲ್ಲ ದಿರಬಹುದು
ಪ್ರೇಮಿಸಿದ ಕಣ್ಣೂ..
ಕುರುಡೇ ?
ಗತ ಕಾಲದ ಪುಟ
ತಿರುವ ಬೇಡ
ತುಂಬಿದ ನೆನಪಿನ
ತಿಜೋರಿಯ ತುಂಬ
ನೀನಿರುವದು ದಿಟ
ನಾಭಿಯ
ನರವೊಂದು
ಮಿಡಿದಿದೆ
ಸಮುತ್ವ ಖಾಲಿ
ಯಾಗುತ್ತಿದೆ
ಕಾಯುವ ಜೀವ
ಕರಗುವ ಮೊದಲು
ಒಂದುಸಾರಿ
ಮುಖವ ತೋರು
ಇಮಾಮ್ ಮದ್ಗಾರ್