ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್
ಮೌನ ಓದುಗ
ನಮ್ಮೊಳಗೆ ಅವನೊಬ್ಬನು ಹಾಗೇ ಸುಮ್ಮನೆ
ಬಸ್ ನಿಲ್ದಾಣದಿ ನಿಂತ ಬಸ್ಸಿನಲ್ಲಿ
ಸುಮ್ಮನೆ ಕುಳಿತವ
ಎಲ್ಲರ ಕಿಚಪಿಚ ಮಾತಿನ ನಡುವೆ
ಮೊಬೈಲ್ ಸದ್ದುಗದ್ದಲ ನಡುವೆ
ಎಲ್ಲವ ನೋಡುತಾ ಎಲ್ಲವ ಅರಿತವ
ಮನೆಯ ಸುದ್ದಿಗಳೆಲ್ಲಾ ಮಾತಿಗೆ ಬಂದು
ಜಗದ ಸುದ್ದಿಯೆಲ್ಲಾ ಪತ್ರಿಕೆಯಲ್ಲಿ ಓದಿ
ಇನ್ನೇನು ಟಿಕೇಟ್ ಎನ್ನುವ ಪದದೊಳಗೆ ಮರೆಯಾಗಿ ನೋಟ ಮತ್ತೆ ಹೊರಗೆ
ಒಳಗೆ ಬಿದ್ದು ಸುಮ್ಮನಾಗುವ ಸರದಿ ಅವನದ್ದು
ಎಷ್ಟು ಕೆಲಸ ಅದೆಷ್ಟೋ ಮನಸು
ಜಗದಿ ಕಾಣುವ ನೋಟಗಳಲ್ಲಿ
ಆದರೂ ಅಂವ ಮೌನ ಓದುಗ
ಓದದೇ ಇರಲಾರ ಭಾವಗಳ
ಎಲ್ಲವ ಸುಮ್ಮನೇ ಓದಿ
ನಕ್ಕು ಹಗುರಾಗುವ ಅಲ್ಲೇ ನಿಂತು
ಮೌನ ಚಪ್ಪರವ ಮನೆಗೆ ಹಾಸಿದಂತೆ
ಮಾತಿಗೆ ಬೆರಗಾಗಿ ನಗುವಿಗೆ ಬೆಳಕಾಗಿ
ಕಣ್ಣೊಳಗೆ ಜೀವಿತವು ಹೂವಾಗಿ
ಕಂಡಂತ ಬದುಕು ಸ್ಫೂರ್ತಿಯಾಗಿ
ಅವನೊಬ್ಬ ಎಲ್ಲರ ರೂಪ ಸೂಕ್ಷ್ಮದಿ
ಇದ್ದರೆ ಚೆಂದ ನಮ್ಮ ನಿಮ್ಮೊಳಗೆ
ಹಾಗೆ ಸುಮ್ಮನೇ ಓದುಗನಾಗಿ……..
ನಾಗರಾಜ ಬಿ.ನಾಯ್ಕ
ಅವನೊಬ್ಬ ಕವಿಯೂ , ಚಂದದ ಕವಿಯೂ..
ಸುಂದರ ಸಾಲು
ಸುಂದರ ಕವನ.