ಖಾಕಿಯೊಳಗಿನ ಕವಿ-ಜೀವನ ಚಕ್ರ

ಖಾಕಿಯೊಳಗಿನ ಕವಿ-

ಜೀವನ ಚಕ್ರ

ಹುಚ್ಚು ಮನಕೆ
ಹೆಚ್ಚೆನು ಹೇಳಲಿ
ಮೆಚ್ಚಿದ ನಲ್ಲೆಯ
ನೆನಪ ಮತ್ತೆ ಮಾಡಿ
ತಳುಕು-ಬಳುಕಿನ
ತಾರೆಯ ಸಂಗ ಬಯಸಿ
ಬೆಳಕಿನ
ಹೊನಪಿನಲಿ ಹೊಯ್ದಾಡುವುದು….

ಬೇಡವಾದ ಎದೆಗೆ
ಕೆಂಡದ ಬೆಸುಗೆ
ಹುಸಿ ನಗುವ ನಂಬಿ
ಉಪ್ಪರಿಗೆಗೆ ಹಾರಿ
ಕೊನೆಗೆ ಧರೆಗೆ ಜಾರಿ
ಕನಲಿತು ದೇಹ
ಪ್ರೇಮದ ಕೋಟೆ ಕುಸಿದು….

ನೆರಳಿನ ಗೋಪುರ
ಗಾಳಿಗೆ ಸಿಲುಕಿದೆ
ಕಾಲಚಕ್ರದಡಿಯಲಿ
ಕರುಣಿಕನ ಆಟ
ಕರುಣೆ ಬಾರದು ಕಲಿಗೆ
ಕಂಟಕ ಪಾತ್ರಧಾರಿಗೆ
ಬಾಳದಾರಿಯಲಿ ಅಭಿನಯಿಸಲು….

ಬಾಳೆಂಬ ರಂಗ ಸಜ್ಜಿಕೆಯಲಿ
ಹಾಡಿ-ಕುಣಿದು
ದೇಹವು ದಣಿದಿದೆ
ಮದ್ಯ ವಿರಾಮವಿಲ್ಲ
ಸಾರಥಿಯು ಮತ್ತೆ ಯುದ್ದ ಸಾರುತಿಹನು
ಸೂತ್ರದಾರನ ಆಣತಿಯಂತೆ
ವಿಧಿಯಾಟ ನಟಿಸದೇ ಬೇರೆ ದಾರಿ ನನಗಿಲ್ಲ…


ಖಾಕಿಯೊಳಗಿನ ಕವಿ

Leave a Reply

Back To Top