ಕಾವ್ಯ ಸಂಗಾತಿ
ಅಕ್ಕಮಹಾದೇವಿ ತೆಗ್ಗಿ
ಪ್ರೀತಿ ……ಅರಳಿತು
ಪ್ರೀತಿ ಅರಳಿತು.
ಮನವು ಮಿಡಿಯಿತು.
ಮೌನ ಆವರಿಸಿತು
ಮಾತುಗಳೆಲ್ಲ ನಿಂತಿತು.
ಮನದ ತುಮುಲ ಹೆಚ್ಚಾಯಿತು.
ಆಸೆಗಳಲ್ಲಿ ಗರಿಕೆದರಿತು.
ನಾನೇ ನನ್ನನ್ನು ಮರೆತೆ
ಪ್ರೇಮ ಸಂಗಮದಲ್ಲಿ ಬೆರೆತೆ,
ಮೈಮನವೆಲ್ಲ ಹೂವಾಗಿ ಅರಳಿತು
ಮಯೂರ ನಂತೆ ನಲಿಯಿತು.
ಅಬ್ಭಾ ಎಂತಹ ಅದ್ಭುತ ಶಕ್ತಿ’
ಅದಕ್ಕೆಲ್ಲ ಬೇಕು ಸಹಜ ಯುಕ್ತಿ
ಪ್ರೀತಿಯ ಸುಮಗಳೇ ಘಮ ಘಮ ‘
ಮಾತಿನಲಿ ಏನೋ ಮಧುರತೆ,
ಪುಟ್ಟ ಹೃದಯದಲಿ
ಬೆಟ್ಟದಷ್ಟು ಮಮತೆ
ಪ್ರೀತಿ ಪ್ರೇಮ ಒಲವು ,ಚೆಲವು
ಎಲ್ಲವೂ ಅನುರಾಗದ ಲಿ ಬಂಧನವು ……
ಅಕ್ಕಮಹಾದೇವಿ ತೆಗ್ಗಿ