ಕಾವ್ಯ ಸಂಗಾತಿ
ನಿಜಗುಣಿ ಎಸ್ ಕೆಂಗನಾಳ ಕವಿತೆ-
ಯೋಗ್ಯತೆ
ನಿನ್ನ ಹತ್ತಿರ ಹಣವೀರುವ
ತನಕ ಎಲ್ಲರೂ ನಿನ್ನನ್ನು
ನೋಡುವರು ಒಬ್ಬ ರಾಜನಂತೆ
ನೀ ಬೀಕಾರಿಯಾದ ಮರುಕ್ಷಣವೇ
ಎಲ್ಲರೂ ನಿನ್ನನ್ನು ನೋಡುವರು
ಒಂದು ಬೀದಿ ನಾಯಿಯಂತೆ…!
ನೀನು ಶಾಂತಮೂತಿ೯ಯಾದರೆ
ಅವರು ನಿನ್ನನ್ನು ಕೊಳ್ಳೆ ಹೊಡೆಯುತ್ತಾರೆ…!
ನೀನು ಉಗ್ರ ನರಸಿಂಹನಾದರೆ
ಅವರು ನಿನ್ನನ್ನು ಕಂಡು ಭಯಬೀತರಾಗಿ
ಮೂಲೆ ಗುಂಪಾಗುತ್ತಾರೆ…!
ಹಣದಿಂದಲೇ ನಿನ್ನನ್ನು ಅಳೆಯುತ್ತಾರೆ
ಹಣದಿಂದಲೇ ನಿನ್ನನ್ನು ಹೊಗಳುತ್ತಾರೆ
ಹಣದಿಂದಲೇ ನಿನ್ನನ್ನು ಅಟ್ಟಕ್ಕೇರಿಸಿ
ಅಲ್ಲಿಂದ ಜಾಡಿಸಿ ಕೆಳಗೆ ಒದೆಯುತ್ತಾರೆ…!
ದಿನ ಕಳೆದಂತೆ ಕಾಲ ಬದಲಾಗುತ್ತಿದೆ
ದಿನ ಕಳೆದಂತೆ ಸಮಯ ಬದಲಾಗುತ್ತಿದೆ
ಸಮಯಕ್ಕೆ ತಕ್ಕಂತೆ ನಾವುಗಳು
ಬದಲಾಗಬೇಕು ಕೆಟ್ಟವರನ್ನ ಮಟ್ಟ ಹಾಕಬೇಕು…!
ನಿಜಗುಣಿ ಎಸ್ ಕೆಂಗನಾಳ