ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ
ಮುಖವಾಡ ತೊಟ್ಟ ಮನ… !!!
ಆಸೆಯ ತೊರೆದೆನೆಂಬ
ನಾಟಕವಾಡಿ,
ದುರಾಸೆಯ ಮೋಹದ
ನಶೆಯೇರಿಸಿಕೊಂಡು,
ಬಣ್ಣದ ಬಟ್ಟೆಯಲಿ
ಹಣ,ಅಂತಸ್ತನು ಗಳಿಸಿ,
ಮಾತಿನ ಮೋಡಿಯಲಿ
ಕನಸಿನ ಗೋಪುರ
ನಿರ್ಮಿಸಿ,
ಮುಗ್ದ ಜನರ ಕಷ್ಟಗಳಿಗೆ
ಬೆಳಕೇ ತಾನೆಂದು
ನಯವಂಚಿಸಿದ,
ದೀಪದ ಬುಡಕ್ಕೆ
ಇಂದು ಕತ್ತಲು
ಆವರಿಸಿದೆ,
ಬೆಳಕಿನ ಹೆಸರಲಿ
ಮಾಡಿದ ,ಮೋಸದ
ಈಟಿಯು ತನ್ನೆದೆಯ
ಚುಚ್ಚಿ ಚುಚ್ಚಿ
ಹಿಂಸಿಸುತಿದೆ,
ಜಗದ ಮುಂದೆ
ಬೆತ್ತಲಾಗಿ ನಿಂತು
ವೇಷವ ಬದಲಿಸಿದೆ,
ಗದ್ದುಗೆಯ ಮಾನವ
ಹರಾಜು ಹಾಕಿ
ಅಧಿಕಾರ,ಹಣದಾಸೆಗೆ
ತನ್ನ ಮೌಲ್ಯದ
ಬದುಕಿಗೆ ತಾನೇ ಚಪ್ಪಡಿ
ಎಳೆದುಕೊಂಡು,
ನಲುಗುತಿದೆ,ಮುಗ್ದ ಜನರ
ಮುಂದೆ ಮುಖವಾಡ
ಕಳಚಿ ಬಿದ್ದಿದೆ…..
ಕಾಡಜ್ಜಿ ಮಂಜುನಾಥ