ಕಾವ್ಯ ಸಂಗಾತಿ
ಬಾಗೇಪಲ್ಲಿಯವರ
ಗಜಲ್
ಗೆಳಯನವ ಎದುರಿನಲಿ ಟೀಕೆಮಾಡಿದವ
ಶಿಖಂಡಿಯವ ಗೈರಿನಲೆನ್ನನು ತೆಗಳಿದವ
ಮಾತಿನಲಿ ಲೇಶ ಮಾತ್ರ ತರ್ಕ ಇರಬೇಕು
ಮೂರ್ಖನವ ಬಾಯಿ ಕೆರೆತವಾಗಿ ಆಡಿದವ
ವಾದಕನವ ವೀಣೆಯಿಂದ ಉಲಿಯುವನು
ದೂರ್ತನವ ಬೆನ್ನಹಿಂದೆ ಎನ್ನ ದೂಷಿಸಿದವ
ಸಲಹೆ ನೀಡೆ ವೆಚ್ಚವಾಗದು ಎಲ್ಲರಿಗೆ ಸಾಧ್ಯ
ಮಿತ್ರನವ ನಿನ್ನೊಳಿತಿನ ಮಾತ ಹೇಳಿದವ
ನರಕವದು ನಗು ನಗುತ ಪೋಗುವೆ ಕೃಷ್ಣಾ!
ಶಕುನಿಯವ ಬೇಡಸಂಗ ಸ್ವರ್ಗ ವಾಸಿಯಾದವ
ಬಾಗೇಪಲ್ಲಿ