ಕಾವ್ಯ ಸಂಗಾತಿ
ತಾತಪ್ಪ.ಕೆ. ಕವಿತೆ-
ಉಸಿರೇ
ನಿನ್ಹೆಸರೇ ಉಸಿರು
ಜೀವಜಾಲದಲ್ಲಿ
ನಿನ್ನದೇ ಕಾರುಬಾರು.
ಬಿಸಿಯುಸಿರು
ಭಾವತಲ್ಲಣಗಳ
ಕಾರಂಜಿ,
ನೋವುವೇದನೆಗಳ
ಬಿಂಬಮುಖಿ.
ಅತೃಪ್ತಿಯ
ಸುಪ್ತಸಾಗರ..
ತಂಪುಸಿರು
ಸಂತೃಪ್ತಿಯ
ನಿತ್ಯನೂತನದ
ಗಮ್ಯಕಾರಂಜಿ,
ಸುಮಧುರ ಅಲೆಗಳ
ಸಪ್ತಸಾಗರ…..
ಉಸಿರುಬೆರೆಸಿದರೆ
ಕೊಳಲಿನ ಝೇಂಕಾರ..
ಉಸಿರ್ಗಟ್ಟಿದಾಗ
ಕಾವ್ಯಸುಧೆಯ ಓಂಕಾರ..
ಉಸಿರು ಮಂಥಿಸಿದರೆ
ಉತ್ಸಾಹ ಉಲ್ಲಾಸ
ಉಸಿರು ಮರೆಯಾದರೆ
ಕಾಣದ ಕೈಲಾಸ.
ಉಸಿರೊಳಗೆ
ಉಸಿರ್ ಬೆರೆತರೆ
ನೈಜ ಜೀವದ ಉಸಿರ್ದಾಣ..
ಉಸಿರೊಳಗೆ
ಉಸಿರ್ ಕೊಳೆತರೆ
ಮರಣದ ಆಭರಣ..
ತಾತಪ್ಪ.ಕೆ
ತುಂಬಾ ಸುಂದರವಾಗಿ ಕವಿತೆ ಮೂಡಿದೆ ಸರ್
ಸೂಪರ್ ಸಾರ್
Superb sir
Thumbha sogasagide nimma usiru adakke channagide e usiru
Super anna
Super sir
Very good poem sir. In second pallavi ending with suptasagar Or Saptasagar?
Very nice sir
ಒಳ್ಳೆಯ ಕವಿತೆ.
ಒಳ್ಳೆಯ ಕವಿತೆಯನ್ನು ಓದಲು ನೀಡಿದ್ದೀರಿ.